ಡಿವಿಜಿ ಸುದ್ದಿ, ಚಿಕ್ಕಮಗಳೂರು: ಜಮೀನು ವಿಚಾರವಾಗಿ ಒಂದೇ ಗ್ರಾಮದ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಜಡಕನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಜಡಕನಕಟ್ಟೆ ಗ್ರಾಮದ ಶಿವಪ್ಪ ಹಾಗೂ ತಿಮ್ಮಪ್ಪ ಕುಟುಂಬಗಳ ಮಧ್ಯೆ ಈ ಗಲಾಟೆ ನಡೆದಿದೆ. ಎರಡು ಕುಟುಂಬದವರು ಖಾರದಪುಡಿ ಎರಚಿ ದೊಣ್ಣೆ, ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಜಮೀನು ನಮ್ಮದು ನಮಗೆ ಸೇರಿದ್ದು ಎಂಬುದು ಎಂಬುದು ಗಲಾಟೆ ಕಾರಣವಾಗಿದೆ.
ಇದು ಪೂರ್ವನಿಯೋಜಿತ ಗಲಾಟೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ಜಮೀನಿಗೆ ಬರುವಾಗ ಕೃಷಿ ಸಲಕರಣೆಗಳ ಜೊತೆಗೆ ಮಹಿಳೆಯರು ಪ್ಲಾಸ್ಟಿಕ್ ಕವರ್ ನಲ್ಲಿ ಖಾರದ ಪುಡಿಯನ್ನು ತಂದಿದ್ದಾರೆ. ಗಲಾಟೆ ವೇಳೆ ಒಬ್ಬರಿಗೊಬ್ಬರು ಖಾರದ ಪುಡಿಯನ್ನು ಎರಚಿ ದೊಣ್ಣೆ ಹಿಡಿದುಕೊಂಡು ಹಲ್ಲೆಗೆ ಮುಂದಾಗಿದ್ದಾರೆ. ಈ ಜಮೀನು ಯಾರಿಗೆ ಸೇರಬೇಕೆಂಬುದು ಸ್ಪಷ್ಟವಾದ ಮಾಹಿತಿ ಇಲ್ಲ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.



