ಡಿವಿಜಿ ಸುದ್ದಿ, ಚನ್ನಗಿರಿ: ಇತ್ತೀಚಿಗೆ ಕೋಗಲೂರು ಗ್ರಾಮ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಶಾಲಾ ಮೈದಾನದ ಅವ್ಯವಸ್ಥೆ ಬಗ್ಗೆ ಜನರು ಅಧಿಕಾರಿಗಳನ್ನು ತರಾಟೆ ತಗೆದುಕೊಂಡಿದ್ದರು. ಈ ವರದಿಯನ್ನು ಡಿವಿಜಿ ಸುದ್ದಿ ವಿಸ್ತೃತವಾಗಿ ವರದಿ ಮಾಡಿತ್ತು. ಈ ವರದಿಗೆ ಎಚ್ಚೆತ್ತ ಅಧಿಕಾರಿಗಳು ಇವತ್ತು ಕೊಗಲೂರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಇದನ್ನು ಓದಿ: ಶಾಲಾ, ಕಾಲೇಜ್ ಮೂಲ ಸೌಕರ್ಯ ಕೊರತೆ: ಅಧಿಕಾರಿಗಳ ತರಾಟೆ ತಗೆದುಕೊಂಡ ಕೋಗಲೂರು ಗ್ರಾಮಸ್ಥರು
ಕೊಗಲೂರಿನ ಹಿರಿಯ ಪ್ರಾಥಮಿಕ ಶಾಲೆಯ ಮೈದಾನವು ಸುಮಾರು ಆರೇಳು ವರ್ಷಗಳಿಂದಲೂ ನೀರು ನಿಂತು ಮಕ್ಕಳಿಗೆ ಆಟ ಆಡುವುದಕ್ಕೆ ತೊಂದರೆ ಆಗುತ್ತಿತ್ತು. ಈ ಹಿಂದೆ ಇದೇ ಮೈದಾನದಲ್ಲಿ ತಾಲ್ಲೂಕು ಮಟ್ಟದ ಕ್ರೀಡೆಗಳನ್ನು ಆಯೋಜಿಸಿದ್ದ ಈ ಮೈದಾನ ಇದೀಗ ಮಳೆ ನೀರು ನಿಂತು, ಹುಲ್ಲು, ಪೊದೆ ಬೆಳೆದು ಮಕ್ಕಳು ಆಟವಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು.

ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಮಂಜುನಾಥ್ ನೇತೃತ್ವದಲ್ಲಿ ಶಾಲೆಗೆ ಭೇಟಿ ನೀಡಿ, ಮೈದಾನದ ಸ್ಥಿತಿಗತಿ ವಿಕ್ಷೀಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಬಂಧಿಸಿದ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಹೇಳಿದರು.

ಈ ಬಗ್ಗೆ ಅನೇಕ ಸಲ ಗ್ರಾಮಸ್ಥರು ಮನವಿ ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಇತ್ತೀಗೆ ನೆಡೆದ ಕೆಡಿಪಿ ಸಭೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತದುಕೊಂಡಿದ್ದರು. ಇದಲ್ಲದೆ ಕೊಗಲೂರು ಕಾಲೇಜಿನಲ್ಲಿ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲೆಂದು ಗ್ರಾಮಸ್ಥರು ವಿಷಯ ಪ್ರಸ್ತಾಪಿಸಿದ್ದರು.
ಇಸಿಓ ಗಳಾದ , ನಾಗರಾಜ್ , ರುದ್ರೇಶ್ ಆರ್ ಪಿ, ತಿಮ್ಮೇಶ್ ಸಿ ಎಸ್, ಶಾಲೆಯ ಮುಖ್ಯ ಶಿಕ್ಷಕ ರುದ್ರಪ್ಪ ಕೆ , ಸಹ ಶಿಕ್ಷಕರುಗಳಾದ ಪರಂ ಜ್ಯೋತಿ ಟಿ , ಎ. ಆರ್. ತಿಮ್ಮಪ್ಪ , ರಾಜಾಭಕ್ಷಿ , ಬಸವರಾಜಪ್ಪ ಎ.ಡಿ , ರುದ್ರಸ್ವಾಮಿ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



