ಡಿವಿಜಿಸುದ್ದಿ.ಕಾಂ, ಚನ್ನಗಿರಿ: ಏಷ್ಯಾದ ಎರಡನೇ ಅತಿ ದೊಡ್ಡ ಕೆರೆಯಾದ ಶಾಂತಿಸಾಗರ ಕೆರೆ ಸರ್ವೇ ಕಾರ್ಯಕ್ಕೆ ಸರ್ಕಾರ ಆದೇಶಿಸಿದ್ದರೂ, ಅಧಿಕಾರಿಗಳ ವಿಳಂಬ ಧೋರಣೆ ಖಂಡಿಸಿ ನವೆಂಬರ್ 2ರಂದು ದಾವಣಗೆರೆ ಡಿಸಿ ಆಫೀಸ್ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲು ಖಡ್ಗ ಸಂಘಟನೆ ಕರೆ ನೀಡಿದೆ.
ಈ ಉಪವಾಸ ಸತ್ಯಾಗ್ರಹ ಪಾಂಡುಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ, ಚನ್ನಗಿರಿ ಹಿರೇ ಮಠದ ಶ್ರೀ ಶಾಂತವೀರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ. ಉಪವಾಸ ಸತ್ಯಾಗ್ರಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೂಳೆಕೆರೆ ಉಳಿಸುವ ಅಭಿಯಾನಕ್ಕೆ ಕೈಜೋಡಿಸಬೇಕೆಂದು ಖಡ್ಗ ಸಂಘಟನೆ ಮನವಿ ಮಾಡಿಕೊಂಡಿದೆ.
ಸೂಳೆಕೆರೆ ಒತ್ತುವರಿ ಖಂಡಿಸಿ ಖಡ್ಗ ಸಂಘಟನೆ ಕಳೆದ ಐದಾರು ವರ್ಷಗಳಿಂದ ನಿರಂತರ ಹೋರಾಟದ ಫಲವಾಗಿ ಸರ್ಕಾರ ಸರ್ವೇ ಕಾರ್ಯಕ್ಕೆ ಮುಂದಾಗಿತ್ತು. ಕಳೆದ ತಿಂಗಳು ಸರ್ವೇ ಕಾರ್ಯಕ್ಕೂ ಚಾಲನೆ ನೀಡಲಾಗಿತ್ತು. ಮೂರು ವಾರದಲ್ಲಿ ಸರ್ವೇ ಮುಗಿಸುವ ಭರವಸೆ ನೀಡಲಾಗಿತ್ತು. ಆದರೆ, ಅನವಶ್ಯಕವಾಗಿ ಸರ್ವೇ ಕಾರ್ಯ ಮುಂದೂಡುತ್ತಿರುವುದು ಆತಂಕ ಮೂಡಿಸಿದೆ. ಹೀಗಾಗಿ ಡಿಸಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮೂಲಕ ಗಮನ ಸೆಳೆಯಲು ನಿರ್ಧರಿಸಲಾಗಿದೆ ಎಂದು ಖಡ್ಗ ಸಂಘಟನೆ ತಿಳಿಸಿದೆ.



