ಡಿವಿಜಿ ಸುದ್ದಿ, ಬೆಳಗಾವಿ: ಅಥಣಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಚ್ಚರಿ ಮೂಡಿಸಿದ್ದ ಜಿಲ್ಲಾ ಪಂಚಾಯತಿ ಬಿಜೆಪಿ ಸದಸ್ಯ ಗುರಪ್ಪ ದಾಶ್ಯಾಳ ನಾಮಪತ್ರ ವಾಪಸ್ ಪಡೆಯುವ ಮೂಲಕ ಕಣದಿಂದ ಹಿಂದೆ ಸರಿದ್ದಾರೆ.
ನಾಮಪತ್ರ ಸಲ್ಲಿಸಿದ ನಾಪತ್ತೆಯಾಗಿದ್ದ ಗುರಪ್ಪ ಇಂದು ಸವದಿ ಪುತ್ರ ಚಿದಾನಂದ ಸವದಿ ಅವರೊಂದಿಗೆ ತಹಶೀಲ್ದಾರ್ ಕಚೇರಿಗೆ ಬಂದು ನಾಮಪತ್ರ ಹಿಂಪಡೆದರು.
ಕಳೆದ 10 ವರ್ಷದಿಂದ ಬಿಜೆಪಿಯಲ್ಲಿದ್ದೇನೆ. ನನ್ನ ರಾಜಕೀಯ ಭವಿಷ್ಯ ದೃಷ್ಟಿಯಿಂದಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಣಕ್ಕಿಳಿದಿದ್ದೆ. ನನ್ನ ಸ್ಪರ್ಧೆ ಹಿಂದೆ ಸವದಿ ಅವರ ಕೈವಾಡವಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದು ಸುಳ್ಳು ಎಂಬುದನ್ನು ನಿರೂಪಿಸುವುದಕ್ಕಾಗಿ ಮತ್ತು ಸವದಿ ಅವರಿಗೆ ಕೆಟ್ಟ ಹೆಸರು ಬಾರದಿರಲೆಂದು ನಾಮಪತ್ರ ವಾಪಸ್ ತೆಗೆದುಕೊಂಡಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.