ಡಿವಿಜಿ ಸುದ್ದಿ, ಹರಪನಹಳ್ಳಿ; ತಾಲೂಕಿನ ಗಡಿ ಭಾಗದಲ್ಲಿರುವ ಕಣವಿ ಗ್ರಾಮ ಮತ್ತು ಕಣವಿ ತಾಂಡಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕುಂಚೂರು ಗ್ರಾಮದಲ್ಲಿ ಭಾರತ ವಿಧ್ಯಾರ್ಥಿಫೆಡರೇಷನ್ ಸಂಘಟನೆಯಿಂದ ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ಕಣವಿ ಗ್ರಾಮ ಮತ್ತು ತಾಂಡದಿಂದ ಹರಪನಹಳ್ಳಿ ಪಟ್ಟಣದ ಶಾಲಾ ಕಾಲೇಜುಗಳಿಗೆ ನಿತ್ಯ ನೂರಾರು ವಿಧ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರಬೇಕು. ಸೂಕ್ತ ಬಸ್ಸು ಇಲ್ಲದ ಕಾರಣ
ವಿಧ್ಯಾರ್ಥಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ವೃದ್ಧರು, ಅಂಗವಿಕಲರು,
ಗರ್ಭಣಿಯರು ಗೋಳು ಹೇಳ ತೀರದಾಗಿದೆ. ಕೂಡಲೇ ಸಾರಿಗೆ ಇಲಾಖೆ ಅದಿಕಾರಿಗಳು ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ಸುಗಳ ವ್ಯವಸ್ಥೆ ಕಲ್ಪಿಸಿಕೊಡಬೇಕು. ಇಲ್ಲದಿದ್ದಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.ಸ್ಥಳಕ್ಕೆ ಆಗಮಿಸಿದ ಸಾರಿಗೆ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭಲ್ಲಿ ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಪಿ.ಲಕ್ಷ್ಮಣನಾಯ್ಕ, ಕಾರ್ಯದರ್ಶಿ ಮೂರ್ತಿ, ಕುಮಾರ, ಶಂಕರ್, ಕೃಷ್ಣನಾಯ್ಕ, ಮಂಜ್ಯಾನಾಯ್ಕ, ಕೀನ್ಯಾನಾಯ್ಕ, ಶಿವಕುಮಾರ, ಯೊಗೇಶ್, ಮೂರ್ತಿನಾಯ್ಕ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು.



