ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆ ಸಮಾಚಾರ ಪತ್ರಿಕಾ ಬಳಗದ ವತಿಯಿಂದ ರಾಮೋಜಿರಾವ್ ಫಿಲ್ಮ್ ಸಿಟಿ ಮತ್ತು ಈಟಿವಿ ಸಮೂಹ ಮಾಧ್ಯಮ ಸಂಸ್ಥೆಯ ಮಾಲೀಕ ರಾಮೋಜಿರಾವ್ ಅವರ ಜೀವನ ಆಧಾರಿತ `ಅಕ್ಷರಯೋಧ ರಾಮೋಜಿರಾವ್’ ಕೃತಿಯನ್ನು ಡಿ.15 ರಂದು ನಗರದ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆಯ ಆವರಣದಲ್ಲಿ ಲೋಕಾರ್ಪಣೆಗೊಳ್ಳಲಿದೆ .
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆ ಸಮಾಚಾರ ಪತ್ರಿಕಾ ಬಳಗದ ಪ್ರಧಾನ ಕಾರ್ಯದರ್ಶಿ ಸಿ.ಕೆ.ಆನಂದತೀರ್ಥಾಚಾರ್, ಕಾರ್ಯಕ್ರಮವನ್ನು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲದ ಕುಲಪತಿ ಡಾ. ಬಿ.ಪಿ.ವೀರಭದ್ರಪ್ಪ ಉದ್ಘಾಟಿಸಲಿದ್ದಾರೆ. ಬಹುಭಾಷಾ ನಟ, ಡೈಲಾಗ್ಕಿಂಗ್ ಪ್ರಖ್ಯಾತಿಯ ಸಾಯಿಕುಮಾರ್ ಈ ಪುಸ್ತಕ ಲೋಕಾರ್ಪಣೆ ಮಾಡಲಿದ್ದು, ವಿಶ್ವಚೇತನ ವಿದ್ಯಾಸಂಸ್ಥೆಯ ಸಂಸ್ಥಾಪಕಿ ಡಾ. ವೀರಮಾನೇನಿ ವಿಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಕೃತಿಯ ರಚನಕಾರರದ ಹಿರಿಯ ಪತ್ರಕರ್ತ ವಿ.ಹನುಮಂತಪ್ಪ , ಜಿಲ್ಲೆ ಸಮಾಚಾರ ಪತ್ರಿಕಾ ಬಳಗದ ಗೌರವ ಅಧ್ಯಕ್ಷ ಎನ್.ಟಿ. ಯರಿಸ್ವಾಮಿ,ಅಧ್ಯಕ್ಷ ಹೆಚ್.ಎನ್.ಪ್ರದೀಪ್ ಉಪಸ್ಥಿತರಿರಲಿದ್ದಾರೆ ಎಂದರು.
ಪುಸ್ತಕ ಕುರಿತು ದಾವಣಗೆರೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ದಾದಾಫೀರ್ ನವಿಲೇಹಾಳ್ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಪ್ರಾಚಾರ್ಯ ಜಸ್ಟಿನ್ ಡಿಸೋಜ ಆಗಮಿಸಲಿದ್ದಾರೆ ಉಪಾಧ್ಯಕ್ಷ ಕುಮಾರ ಆನೆಕೊಂಡ ಹೇಳಿದರು.
ರಾಮೋಜಿ ರಾವ್ ಅವರು ಈ ನಾಡು ದಿನಪತ್ರಿಕೆ, ಈಟಿವಿ ವಾಹಿನಿ, ಉಷಾಕಿರಣ ಮೂವಿಸ್ ಹೀಗೆ ಮಾಧ್ಯಮ ಲೋಕಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ಬಳಗದ ಸಂಚಾಲಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದರು.



