ಡಿವಿಜಿ ಸುದ್ದಿ, ದಾವಣಗೆರೆ: ಭೋವಿ ಸಮಾಜದ ಜನಾಂಗದರು ಕಳೆದ ಐವತ್ತು ದಿನಗಳಿಂದ ಕೊರೊನಾ ವೈರಸ್ ಲಾಕ್ ಡೌನ್ ನಿಂದ ತೀವ್ರ ತೊಂದರೆಯಲ್ಲಿದ್ದಾರೆ. ಭೋವಿ ಸಮಾಜದ ಬಡವರಿಗೆ ಆಥಿ೯ಕ ನೆರವು ಘೋಷಿಸಬೇಕೆಂದು ಭೋವಿ ಸಮಾಜದ ಮುಖಂಡ ಹಾಗೂ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಡಿ. ಬಸವರಾಜ್ ಮುಖ್ಯ ಮಂತ್ರಿ ಬಿಎಸ್. ಯಡಿಯೂರಪ್ಪ ನವರನ್ನು ಆಗ್ರಹಿಸಿದ್ದಾರೆ.
ಭೋವಿ ಸಮಾಜದವರು ರಟ್ಟೆ ನಂಬಿ ಬದುಕುವ ಶ್ರಮ ಜೀವಿಗಳು,ಕಾಯಕವನ್ನೆ ನಂಬಿ ಬದುಕುವ ಭೋವಿ ಸಮಾಜದವರು ಕಲ್ಲು ಹೊಡೆಯುವ, ಕಟ್ಟಡ ಕಟ್ಟುವ, ದೇವಸ್ಥಾನಗಳನ್ನು ಕಟ್ಟುವ ಶಿಲ್ಪಿಗಳು, ರಸ್ತೆ ಕಾಮಗಾರಿ ,ಚೆಕ್ ಡ್ಯಾಂ ನಿರ್ಮಾಣ, ಕೆರೆ ಕಟ್ಟೆ ನಿವಿು೯ಸುವ ರಾಷ್ಟ್ರದ ಅಭಿವೃದ್ಧಿಯ ಶಿಲ್ಪಿಗಳು, ಇಂದು ಉದ್ಯೋಗವಿಲ್ಲದೇ ಅವರ ಬದುಕು ದುಸ್ತರವಾಗಿದೆ.

ಭೋವಿ ಸಮಾಜದ ಗುರುಪೀಠದ ಗುರುಗಳಾದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾವಿುಜಿಯವರು ಸೋಮವಾರದಂದು ಮುಖ್ಯ ಮಂತ್ರಿ ಬಿ ಎಸ್ ವೈ ರವರನ್ನು ಕಂಡು ಭೋವಿ ಸಮಜದವರಿಗೆ ಜೀವನಾಂಶ ನೀಡಲು ಮನವಿ ಸಲ್ಲಿಸಿರುತ್ತಾರೆ ಯಡಿಯೂರಪ್ಪ ಅವರು ಪರಿಶಿಷ್ಟ ಜಾತಿಯಲ್ಲಿರುವ ಅಸಂಘಟಿತ ಭೋವಿ ಸಮಾಜದ ಬಂಧುಗಳಿಗೆ ಆಥಿ೯ಕ ನೆರವು ನೀಡಲು ಡಿ. ಬಸವರಾಜ್ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.



