ಡಿವಿಜಿ ಸುದ್ದಿ, ಭದ್ರಾವತಿ: ಭದ್ರಾವತಿ ಗ್ರಾಮಾಂತರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್.ಕೆ ಜಂಕ್ಷನ್ ರಾಮಿನಕೊಪ್ಪ ಕ್ರಾಸ್ ಬಳಿ ದರೋಡೆಕೋರರು ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಸಂಚು ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಭದ್ರಾವತಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ್ ರವರ ಮಾರ್ಗದರ್ಶನದಲ್ಲಿ, ಭದ್ರಾವತಿ ಗ್ರಾಮಾಂತರ ವೃತ್ತನಿರೀಕ್ಷಕ ಮಂಜುನಾಥ ಇ.ಒ. ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ.
ಹಾಸನ ಜಿಲ್ಲೆಯ ಲಯನ್ ಎಂ ಎನ್ ( 23)ನಿಖಿಲ್ ( 23) ಬೆಂಗಳೂರಿನ ಮಧುಸೂದ (19 ) ಅರ್ಜುನ್ (22) ಕೌಶಿಕ್ ಕುಮಾರ್ ಸಿ (23) ಆರೋಪಿ ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಐದು 5 ಜನ ದರೋಡೆಕೋರಿಂದ 7,ಲಕ್ಷ ಮೌಲ್ಯದ ರೆನಾಲ್ಟ್ ಡಸ್ಟರ್ ಕಾರು ಮತ್ತು 30,500 ಸಾವಿರ ಮೌಲ್ಯದ 08 ಗ್ರಾಂ ತೂಕದ ಬಂಗಾರದ ಉಂಗುರಗಳ ವಶ ಪಡೆಯಲಾಗಿದೆ.
ಇದಲ್ಲದೆ ಮಂಡ್ಯ ಜಿಲ್ಲೆಯ ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಆರೋಪಿಗಳಿ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ. ಐದು ಜನ ದರೋಡೆಕೋರರನ್ನು ಪೋಲಿಸರು ಬಂಧಿಸಿ ನ್ಯಾಯಲಕ್ಕೆ ಹಾಜರುಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ವರಿಷ್ಠಾದಿಕಾರಿ ಶಾಂತರಾಜ್ ರವರು ತಂಡವನ್ನು ಅಭಿನಂದಿಸಿದ್ದಾರೆ



