ಡಿವಿಜಿ ಸುದ್ದಿ, ಭದ್ರಾವತಿ: ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಉತ್ತಮ ಮಳೆಯಾಗುತ್ತಿದ್ದು, ಭದ್ರಾ ಡ್ಯಾಂ ಒಳ ಹರಿವಿನಲ್ಲಿ ಭಾರೀ ಏರಿಕೆ ಕಂಡಿದೆ. ಒಳಹರಿವು 57,477 ಕ್ಯೂಸೆಕ್ಸ್ ಇದ್ದು, ಇಂದಿನ ನೀರಿನ ಮಟ್ಟ 164.5 ರಷ್ಟು ಇದೆ. ಬಲ ದಂಡೆಯಿಂದ 2,000 ಕ್ಯೂಸೆಕ್ಸ್ ಹಾಗೂ ಎಡದಂಡೆಯಿಂದ 50 ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ.
ಈಗಾಗಲೇ ತುಂಗಾ ಡ್ಯಾಂ ತುಂಬಿದ್ದು22 ಗೇಟ್ ಗಳ ಮೂಲಕ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ಇನ್ನಷ್ಟು ನೀರು ಹೆಚ್ಚಾಗುವ ಸಾಧ್ಯತೆ ಇದೆ.
- ಇಂದಿನ ನೀರಿನ ಮಟ್ಟ: 164′ 5″‘
- ಪೂರ್ಣ ಮಟ್ಟ:186′ ಅಡಿ
- ಇಂದಿನ ಸಾಮರ್ಥ್ಯ: 47.152 ಟಿಎಂಸಿ
- ಒಟ್ಟು ಸಾಮರ್ಥ್ಯ:71.535 ಟಿಎಂಸಿ
- ಒಳಹರಿವು: 57477 ಕ್ಯೂಸೆಕ್ಸ್
- ಒಟ್ಟು ಹೊರಹರಿವು: 2189 ಕ್ಯೂಸೆಕ್ಸ್
- ಬಲದಂಡೆ ನಾಲೆ: 2000 ಕ್ಯೂಸೆಕ್ಸ್
- ಎಡದಂಡೆ ನಾಲೆ: 50 ಕ್ಯೂಸೆಕ್ಸ್
- ಕ್ರೆಸ್ಟ್ ಗೇಟ್ ಮುಖಾಂತರ: 0.00 ಕ್ಯೂಸೆಕ್ಸ್
- ರಿವರ್ ಬೆಡ್ ಯುನಿಟ್: 0.00 ಕ್ಯೂಸೆಕ್ಸ್
- ಸ್ಲೂಯಿಸ್ ಗೇಟ್ ಮುಖಾಂತರ ನದಿಗೆ: 50 ಕ್ಯೂಸೆಕ್ಸ್
- ಆವಿಯಾಗುವಿಕೆ: 89 ಕ್ಯೂಸೆಕ್ಸ್
- ಕಳೆದ ವರ್ಷದ ಮಟ್ಟ:154’3″ಅಡಿ
- ಸಾಮರ್ಥ್ಯ: 37.794 ಟಿ ಎಂ ಸಿ