ಡಿವಿಜಿ ಸುದ್ದಿ, ಭದ್ರಾವತಿ: ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗದ ಕುಡಿಯುವ ನೀರು ಹಾಗೂ ರೈತರ ಜೀವನಾಡಿಯಾಗಿರುವ ಭದ್ರಾ ಡ್ಯಾಂ ಭರ್ತಿಯಾಗಿದೆ. ಹೀಗಾಗಿ ನಾಲ್ಕು ಕ್ರಸ್ಟ್ ಗೇಟ್ ಮೂಲಕ 1,700 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಯಿತು.
ಭದ್ರಾ ಡ್ಯಾಂ ಗರಿಷ್ಠ ಮಟ್ಟ 186 ಅಡಿಯಾಗಿದ್ದು, ಇಂದಿನ ನೀರಿನ ಮಟ್ಟ 185.5 ಅಡಿಗೆ ತಲುಪಿದೆ. ಗರಿಷ್ಠ ಮುಟ್ಟಿದ ನಂತರ ಡ್ಯಾಂ ನಾಲ್ಕು ಗೇಟ್ ಮೂಲಕ 1700 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಯಿತು. ಡ್ಯಾಂಗೆ 8653 ಕ್ಯೂಸೆಕ್ಸ್ ಒಳ ಹರಿವು ಇದ್ದು, ವಿದ್ಯುತ್ ಉತ್ಪಾದನೆಗೆ, ಅಪ್ಪರ್ ಭದ್ರಾ ಹಾಗೂ ಕ್ರಸ್ಟ್ ಗೇಟ್ ಸೇರಿದಂತೆ ಒಟ್ಟು 3 ಸಾವಿರ ಕ್ಯೂಸೆಕ್ಸ್ ನೀರು ಹೊರಗಡೆ ಬಿಡಲಾಗಿದೆ.
- ಇಂದಿನ ನೀರಿನ ಮಟ್ಟ: 185’7″
- ಪೂರ್ಣ ಮಟ್ಟ:186′ ಅಡಿ
- ಇಂದಿನ ಸಾಮರ್ಥ್ಯ: 70.012 ಟಿಎಂಸಿ
- ಒಟ್ಟು ಸಾಮರ್ಥ್ಯ:71.535 ಟಿಎಂಸಿ
- ಒಳಹರಿವು:8653 ಕ್ಯೂಸೆಕ್ಸ್
- ಒಟ್ಟು ಹೊರಹರಿವು:2288 ಕ್ಯೂಸೆಕ್ಸ್
- ಕಳೆದ ವರ್ಷದ ಮಟ್ಟ:185’8″ಅಡಿ
- ಸಾಮರ್ಥ್ಯ: 71.116 ಟಿ ಎಎಂ ಸಿ
ಸತತ ಮೂರು ವರ್ಷಗಳಿಂದ ಭದ್ರಾ ಡ್ಯಾಂ ಭರ್ತಿಯಾಗುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಕಳೆದ ಭಾರಿಯಂತೆಯೇ ಈ ಬಾರಿಯೂ ಮುಂಗಾರು ಮಳೆ ಕೈ ಕೊಟ್ಟಿತ್ತು. ಡ್ಯಾಂ ತುಂಬುದು ಕಷ್ಟ ಸಾಧ್ಯ ಎನ್ನಲಾಗುತ್ತಿತ್ತು. ಆದರೆ, ಕಳೆದ ಒಂದು ತಿಂಗಳಿಂದ ಸುರಿದ ಉತ್ತಮ ಮಳೆಯಿಂದ ಡ್ಯಾಂ ಭರ್ತಿಯಾಗಿದ್ದು ರೈತರಲ್ಲಿ ಸಂತಸ ಮೂಡಿದೆ. ಈ ಬಾರಿಯ ಬೇಸಿಗೆ ಹಂಗಾಮಿಗೂ ನೀರು ಸಿಗಲಿದೆ.




