Connect with us

Dvgsuddi Kannada | online news portal | Kannada news online

ಮುಂದಿನ ವರ್ಷ ಜೂನ್  ಒಳಗೆ 25 ಸಾವಿರ ಮನೆ ನಿರ್ಮಾಣವಾಗದಿದ್ದರೆ ರಾಜೀನಾಮೆ ಕೊಡ್ತೀನಿ: ವಸತಿ ಸಚಿವ ಸೋಮಣ್ಣ

ಪ್ರಮುಖ ಸುದ್ದಿ

ಮುಂದಿನ ವರ್ಷ ಜೂನ್  ಒಳಗೆ 25 ಸಾವಿರ ಮನೆ ನಿರ್ಮಾಣವಾಗದಿದ್ದರೆ ರಾಜೀನಾಮೆ ಕೊಡ್ತೀನಿ: ವಸತಿ ಸಚಿವ ಸೋಮಣ್ಣ

ಡಿವಿಜಿ ಸುದ್ದಿ, ಬೆಂಗಳೂರು:  ಮುಂದಿನ ವರ್ಷದ ಜೂನ್ ಒಳಗೆ 25 ಸಾವಿರ ಮನೆ ನಿರ್ಮಾಣವಾಗದೇ  ಹೋದ್ರೆ,  ನಾನು ವಸತಿ ಇಲಾಖೆಗೆ ರಾಜೀನಾಮೆ ಕೊಡ್ತೀನಿ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ.

ವಸತಿ ಇಲಾಖೆಗೆ ಸಂಬಂಧಿಸಿದಂತೆ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮನೆಗಳ ನಿರ್ಮಾಣದ ಕುರಿತು ಚರ್ಚೆ ನಡೆಯಿತು. ಸಭೆ ಬಳಿಕ ಮಾತನಾಡಿದರು .

ಒಂದು ಲಕ್ಷ ಮನೆ ಯೋಜನೆ ಸಂಬಂಧ ಸಭೆಯಲ್ಲಿ ಚರ್ಚಿಸಿದ್ದೇವೆ. ಬೆಂಗಳೂರು ಡಿಸಿ, ತಹಶೀಲ್ದಾರ್, ಸರ್ವೆ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳನ್ನೊಳಗೊಂಡು ಸಭೆ ನಡೆಸಿದ್ದೇವೆ ಎಂದರು.

ಒಟ್ಟು 900 ಎಕರೆ ಜಾಗ ಒಂದು ಲಕ್ಷ ಮನೆ ಯೋಜನೆಗೆ ಸಿಗಲಿದೆ. 35 ಸಾವಿರ ಹೊಸ ಮನೆಗೆ ಒಂದು ವಾರದಲ್ಲಿ ಟೆಂಡರ್ ಕರೆಯುತ್ತೇವೆ. 2021ರ ಜೂನ್ ಒಳಗೆ 25-30 ಸಾವಿರ ಮನೆ ಬಡವರಿಗೆ ಕೊಡ್ತೀವಿ. ಈಗಾಗಲೇ 31 ಸಾವಿರ ಫಲಾನುಭವಿಗಳು ಅರ್ಜಿ ಹಾಕಿದ್ದಾರೆ. ಇನ್ನೊಂದು ವಾರದಲ್ಲಿ ಮತ್ತೆ ಆನ್‍ಲೈನ್ ಮೂಲಕ ಅರ್ಜಿ ಕರೆಯುತ್ತೇವೆ. ಬಡವರಿಗೆ ಮನೆ ಕೊಡುವ ಕೆಲಸ ಮಾಡ್ತೀವಿ ಎಂದು ತಿಳಿಸಿದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top