ಡಿವಿಜಿ ಸುದ್ದಿ, ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮತ್ತೆ 9 ದಿನ ಲಾಕ್‍ಡೌನ್ ಮಾಡಿ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.
ಈ ಬಗ್ಗೆ ಸರ್ಕಾರದಿಂದ ಅಧಿಕೃತ ಘೋಷಣೆಯಾಗಿದ್ದು, ಮಂಗಳವಾರ ರಾತ್ರಿ 8 ಗಂಟೆ ನಂತರದಿಂದ 9 ದಿನಗಳ ಕಾಲ ಲಾಕ್ ಡೌನ್ ಜಾರಿ ಇರಲಿದೆ. ಜು. 14 ರಿಂದ ಜು. 23 ವರಗೆ ಲಾಕ್ ಡೌನ್ ಜಾರಿ ಇರಲಿದೆ. ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿ ಇರಲಿದೆ.
ಒಂದು ವಾರದಿಂದ ಬೆಂಗಳೂರು ಒಂದರಲ್ಲಿಯೇ ಸಾವಿರ ಗಡಿ ದಾಟಿದ ಹಿನ್ನೆಲೆ, ಮತ್ತೆ ಲಾಕ್ ಡೌನ್ ಹೇರಲಾಗಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ತಜ್ಞ ಲಾಕ್ ಡೌನ್ ಸಲಹೆ ನೀಡಿದ್ದರಿಂದ ಲಾಕ್ ಡೌನ್ ಘೋಷಿಸಲಾಗಿದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಬಂದ್ ಆಗಲಿವೆ. ಸಾರಿಗೆ, ಹೋಟೆಲ್, ಮಾಲ್ , ರೆಸ್ಟೋರೆಂಟ್, ಬಾರ್, ಓಲಾ, ಉಬರ್ ಸೇರಿದಂತೆ ಎಲ್ಲಾ ಬಂದ್ ಆಗಲಿವೆ.



