ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸದ ನಡುವೆಯೂ ರಾಜಧಾನಿ ಬೆಂಗಳೂರುಲ್ಲಿ ರೋಹಿಣಿ ಮಳೆಯ ಅಬ್ಬರ ಜೋರಾಗಿದೆ. ಕಳೆದ ಮೂರು ದಿನಗಳಿಂದ ಬೆಂಗಳೂರು ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ವರುಣನ ಆರ್ಭಟ ಮುಂದುವರೆದಿದೆ.
ಬೆಂಗಳೂರಿನಲ್ಲಿ ಸತತ ನಾಲ್ಲು ದಿನಗಳಿಂದ ಸಂಜೆ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಈ ಮಳೆಯ ಅಬ್ಬರಕ್ಕೆ ನಗರದ ಹಲವೆಡೆ 40ಕ್ಕೂ ಹೆಚ್ಚು ಮರಗಳು ಉರುಳಿದ್ದು, ಕೆಲವು ತಗ್ಗು ಪ್ರದೇಶದಲ್ಲಿ ನೀರು ತುಂಬಿಕೊಂಡಿದೆ.

ಕೆಆರ್ ವೃತ್ತದಲ್ಲಿ ಚಲಿಸುವ ಕಾರಿನ ಮೇಲೆ ಮರ ಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಮಲ್ಲೇಶ್ವರಂನಲ್ಲಿ ಕಟ್ಟವೊಂದಕ್ಕೆ ಹಾನಿಯಾಗಿದ್ದು, ಕಾರೊಂದು ಸಂಪೂರ್ಣ ಹಾನಿಗೊಂಡಿದೆ.
ವರುಣನ ಅಬ್ಬಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಜನರು ಬಿಚ್ಚಿ ಬಿದ್ದಿದ್ದಾರೆ. ಮಳೆಯಿಂದ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಪರದಾಡಿದರು. ಬಹುತೇಕ ಕಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೆಲಮಂಗಲದಲ್ಲಿ ಬೈಕೊಂದು ಕೊಚ್ಚಿ ಹೋಗಿದೆ. ಹೆಬ್ಬಾಳ ಬಳಿ ಲುಂಬಿಣಿ ಗಾರ್ಡನ್, ಆನಂದರಾವ್ ಸರ್ಕಲ್, ವಿಧಾನ ಸೌಧ, ವಿದ್ಯಾರಣ್ಯಪುರ, ಕಾವೇರಿ ಜಂಕ್ಷನ್ ಸೇರಿದಂತೆ ರಾಜಾಜಿನಗರ ಕೆಲವು ಕಡೆ ಮರಗಳು ರಸ್ತೆಗೆ ಉರುಳಿ ಬಿದ್ದಿವೆ.



