ಡಿವಿಜಿ ಸುದ್ದಿ, ಶಿವಮೊಗ್ಗ: ಬೆಂಗಳೂರಿನ ಮತಾಂಧ ಮುಸಲ್ಮಾನರ ದಾಳಿ ಖಂಡನೀಯ. ಈ ಘಟನೆ ನಡೆದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಖಂಡನೆ ವ್ಯಕ್ತಪಡಿಸಿಲ್ಲ. ಇದನ್ನು ನೋಡಿದರೆ ಇಂತಹ ಮತಾಂಧ ಮುಸಲ್ಮಾನರಿಗೆ ಡಿಕೆಶಿ ಬೆಂಬಲ ಇದೆ ಅನ್ನಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಸಚಿವರು, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ರವರ ಮನೆಯ ದಾಳಿ, ಬೆಂಗಳೂರಿನಲ್ಲಿ ನಡೆದ ದುಷ್ಕೃತ್ಯ ಖಂಡನೀಯ. ಈ ಘಟನೆಯನ್ನು ಸಹಿಸುವುದಿಲ್ಲ. ಇದನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನದೇ ಎಲ್ಲರೂ ಖಂಡಿಸಬೇಕಿದೆ ಎಂದರು.

ನಾನು ಎಲ್ಲಾ ಮುಸ್ಲಿಮರು ಕೆಟ್ಟವರು ಎಂದು ಹೇಳುತ್ತಿಲ್ಲ. ಆದರೆ ಮತಾಂಧ ಮುಸಲ್ಮಾರು ಮಾತ್ರ ಇಂತಹ ದುಷ್ಕೃತ್ಯದಲ್ಲಿ ತೂಡಗಿದ್ದಾರೆ. ಇಂತಹ ಮತಾಂಧ ಮುಸ್ಲಿಮರ ವಿರುದ್ಧ ಎಲ್ಲಾ ಪಕ್ಷಗಳು ಪಕ್ಷಾತೀತವಾಗಿ ಖಂಡಿಸಬೇಕಿದೆ ಎಂದರು.
ಪೊಲೀಸರು, ಮಾಧ್ಯಮದವರ ಮೇಲೂ ಹಲ್ಲೆ ನಡೆದಿದೆ. ಉಗ್ರಗಾಮಿಗಳನ್ನು ಸದೆಬಡೆದ ದೇಶ ಭಾರತ. ಇಂತಹ ದುಷ್ಕೃತ್ಯಗಳಿಗೆ ಎದುರುವ ಮಾತೇ ಇಲ್ಲ. ಆದರೆ ಈ ಘಟನೆ ಬಗ್ಗೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾಕೆ ಖಂಡನೆ ವ್ಯಕ್ತಪಡಿಸಿಲ್ಲ ಎಂದು ಪ್ರಶ್ನೆ ಮಾಡಿದರು.
ಡಿ.ಕೆ.ಶಿವಕುಮಾರ್ ಇಂತಹವರ ವಿರುದ್ದ ಹೇಳಿಕೆ ನೀಡಬೇಕಿತ್ತು. ಇಂತಹ ಮತಾಂಧ ಮುಸ್ಲಿಂರಿಗೆ ಡಿ.ಕೆ.ಶಿವಕುಮಾರ್ ಬೆಂಬಲವಿದೆ ಎಂದೆನ್ನಿಸುತ್ತದೆ ಎಂದು ಹೇಳಿದರು. ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಡಿಕೆಶಿ ಹೇಳಿದ್ದೇನು..?
ಯಾರು ಕೂಡ ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬಾರದು. ನಿನ್ನೆ ನಡೆದ ಘಟನೆಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ. ಶಾಸಕರಾಗಲಿ, ಯಾರೇ ಆಗಲಿ ಅವರ ಮೇಲೆ ದಾಳಿ ಮಾಡಬಾರದು. ಪೊಲೀಸ್ ಠಾಣೆಯ ಆಸ್ತಿ- ಪಾಸ್ತಿಗೆ ಹಾನಿ ಮಾಡಿರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದರು.



