ಡಿವಿಜಿ ಸುದ್ದಿ, ಬೆಂಗಳೂರು: ಹೌದು ಹುಲಿಯಾ ಡೈಲಾಗ್ ಮೂಲಕ ರಾಜ್ಯದೆಲ್ಲೆಡೆ ಮನೆ ಮಾತಾಗಿದ್ದ ಪೀರಪ್ಪ ಕಟ್ಟಿಮನಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದ್ರು.
ಕಾಗವಾಡ ಉಪಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆ, ಇಂದಿರಾಗಾಂಧಿ ಈ ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ್ರು ಎಂದ ತಕ್ಷಣ.. ‘ಹೌದು ಹುಲಿಯಾ’… ಎಂದಿದ್ದ ಪೀರಪ್ಪನ ಡೈಲಾಗ್ ಸಾಮಾಜಿಕ ಜಾಲ ತಾಣದಲ್ಲಿ ಸಖತ್ ಫೇಮಸ್ ಆಗಿತ್ತು.
ಹೌದು ಹುಲಿಯಾ ಎಂದು ಹೇಳಿದ್ದು ಡೈಲಾಗ್ ರಾಜ್ಯಾದ್ಯಂತ ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿತ್ತು. ಈ ಡೈಲಾಗ್ ಇಟ್ಟುಕೊಂಡು ಯುವ ಸಮೂಹ ಟಿಕ್ ಟಾಕ್ ಶುರು ಮಾಡಿಕೊಂಡಿದ್ರು. ಪೀರಪ್ಪ ಸಿದ್ದರಾಮಯ್ಯರನ್ನ ಭೇಟಿ ಆರ್ಶೀವಾದ ಪಡೆದರು.
ಸಿದ್ದರಾಮಯ್ಯ ಅವರನ್ನು ಕಂಡ ತಕ್ಷಣ ಪೀರಪ್ಪ ಕಾಲಿಗೆ ಬಿದ್ದು ನಮಸ್ಕರಿಸಿ ನೀವೆ ನಮ್ಮ ಒಡೆಯಾ ಎಂದಿದ್ದಾನೆ. ನೀವು ಕೊಟ್ಟ ಒಂದು ರೂಪಾಯಿ ಕೆಜಿ ಅಕ್ಕಿ ತುಂಬಾ ಉಪಕಾರ ಆಗಿದೆ ಅಂತಾ ಹೇಳಿದ್ದಾನೆ.ರಾಜ್ಯಾದ್ಯಂತ ನೀನು ಫೇಮಸ್ ಆದ್ಯಾಲಪ್ಲ ಅಂತಾ ಪಕೀರಪ್ಪನನ್ನ ಸಿದ್ದರಾಮಯ್ಯ ನವರು ಕೇಳಿದಾಗ ಪಕೀರಪ್ಪ ಏನು ಮಾತನಾಡದೇ ಸಿದ್ದರಾಮಯ್ಯ ಮೌನಕ್ಕೆ ಶರಣಾಗಿ ಮುಗುಳ್ನಗೆ ಬೀರಿದ.
ಈ ಬಗ್ಗೆ ಸಿದ್ದರಾಮಯ್ಯ ನವರು ಟ್ವೀಟ್ ಮಾಡಿದ್ದು ಕಾಗವಾಡದಲ್ಲಿ ನನ್ನ ಭಾಷಣದ ವೇಳೆ ಹೌದು ಹುಲಿಯಾ ಅಂತಾ ಅವನದ್ದೇ ಶೈಲಿಯಲ್ಲಿ ಪ್ರೀತಿಯಿಂದ ಕೂಗಿದ್ದ ಈ ಪೀರಪ್ಪ ಕಟ್ಟಿಮನಿ. ಅಷ್ಟೇ ಪ್ರೀತಿಯಿಂದ ನನ್ನ ಆರೋಗ್ಯ ವಿಚಾರಿಸಲು ಬಂದಿದ್ದಾನೆ. ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯದ ಇತನೇ ನಿಜವಾದ ಹುಲಿಯಾ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಗವಾಡದಲ್ಲಿ ನನ್ನ ಭಾಷಣದ ವೇಳೆ "ಹೌದೋ ಹುಲಿಯಾ" ಅಂತ ಅವನದ್ದೇ ಶೈಲಿಯಲ್ಲಿ ಪ್ರೀತಿಯಿಂದ ಕೂಗಿದ್ದ ಈ ಪೀರಪ್ಪ ಕಟ್ಟೀಮನಿ.
ಅಷ್ಟೇ ಪ್ರೀತಿಯಿಂದ ಇಂದು ನನ್ನ ಆರೋಗ್ಯ ವಿಚಾರಿಸಲು ಬಂದಿದ್ದಾನೆ.
ಇಂಥ ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯದ ಈತನೇ ನಿಜವಾದ 'ಹುಲಿಯಾ'. pic.twitter.com/rgTLG469Jv
— Siddaramaiah (@siddaramaiah) December 16, 2019