ಡಿವಿಜಿ ಸುದ್ದಿ, ಬಳ್ಳಾರಿ: ಕೊಟ್ಟೂರು ತಾಲ್ಲೂಕಿನಲ್ಲಿ ಹಳೇ ಗೋಡೆ ಕುಸಿದು ಪಾಯ ಅಗೆಯುತ್ತಿದ್ದ ಓವ೯ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಪಟ್ಟಣದ ಉಜ್ಜಿನಿ ವೃತ್ತದ ಬಳಿ ನಡೆದಿದೆ.

ವೀರೇಶ ಎಂಬುವವರಿಗೆ ಸೇರಿದ ಹಳೇಮನೆಗೆ ಹೊಂದಿಕೊಂಡಿದ್ದ ಪಾಯವನ್ನು ಅಗೆಯುತ್ತಿದ್ದ ಹುಣುಸೇಕಟ್ಟೆ ಗ್ರಾಮದ ಹರಿಜನ ಅಂಜಿನಪ್ಪ(29) ಹಾಗೂ ಇತರೆ 5 ಜನರು ಪಾಯ ಅಗೆಯೋದರಲ್ಲಿ ತಲ್ಲೀನರಾಗಿದ್ದಾಗ ಆಕಸ್ಮಾತ್ ಹಳೇ ಗೋಡೆ ಕುಸಿದಿದ್ದು. ಮಣ್ಣಿನಲ್ಲಿ ಮುಚ್ವಿಹೋಗಿದ್ದ ಅಂಜಿನಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕುಸಿದ ಗೋಡೆಯಡಿ ಸಿಲುಕಿ ಕೊಂಡಿದ್ದ ಉಳಿದವರನ್ನು ಸಾವ೯ಜನಿಕರ ನೆರವಿನಿಂದ ಅಗ್ನಿಶಾಮಕದಳ ಮತ್ತು ಪೊಲೀಸರು ಗಾಯಾಳುಗಳನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.



