ಡಿವಿಜಿ ಸುದ್ದಿ, ಹರಹನಹಳ್ಳಿ: ಬಳ್ಳಾರಿ ಜಿಲ್ಲೆ ಅರಸೀಕೆರೆ ಪೊಲೀಸ್ ಹೆಡ್ ಕಾನ್ಸಟೇಬಲ್ ಗೆ ಸೊಂಕು ಧೃಡಪಟ್ಟಿದ್ದು, ಹೆಡ್ ಕಾನ್ಸಟೇಬಲ್ ಭೇಟಿ ನೀಡಿದ ಸ್ಥಳಗಳಲ್ಲಿ ಆತಂಕ ಮೂಡಿದೆ.
ನಿನ್ನೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಿಗೆ ಹೆಡ್ ಕಾನ್ಸಟೇಬಲ್ ಭೇಟಿ ನೀಡಿದ್ದ ಹಿನ್ನೆಲೆ ಪರೀಕ್ಷಾ ಕೇಂದ್ರಗಳಿಗೆ ಸಾನಿಟೈಸರ್ ಸಿಂಪಡಣೆ ನಡೆಯುತ್ತಿದೆ. ಉಚ್ಚಂಗಿದುರ್ಗದ ಪ್ರಾಥಮಿಕ ಶಾಲಾ ಆವರಣಕ್ಕೆ ಬಿಇಓ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಪೋಷಕರು ಯಾವುದೇ ಆತಂಕಪಡುವ ಅಗತ್ಯವಿಲ್ಲವೆಂಬ ಭರವಸೆ ನೀಡಿದರು.
ಈಗಾಗಲೇ ಬಳ್ಳಾರಿ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಹೆಡ್ ಕಾನ್ಸಟೇಬಲ್ ಚಿಕಿತ್ಸೆ ನೀಡಲಾಗುತ್ತಿದೆ.



