ಡಿವಿಜಿ ಸುದ್ದಿ,ಬೆಳಗಾವಿ: ಬೈಲೂರು ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಅವರಿಗೆ ಜನವರಿ 29ರಂದು ಕೊಲೆ ಮಾಡುವುದಾಗಿ ಬೆದರಿಕೆ ಪತ್ರ ದಾವಣಗೆರೆಯಿಂದ ರವಾನೆಯಾಗಿದೆ.
ಈ ಪತ್ರಕ್ಕೂ ಮುನ್ನ ಶಿಷ್ಯಂದಿಗೆ ದೂರವಾಣಿಗೆ ಕರೆ ಮಾಡಿ, ಹತ್ಯೆ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಕಳೆದ 2–3 ತಿಂಗಳಿನಿಂದ ಕರೆಗಳು ಬರುತ್ತೇವೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅರಿಗೆ ದೂರು ನೀಡಿದ್ದೇವೆ ಎಂದು ಶ್ರೀ ತಿಳಿಸಿದ್ದಾರೆ.
ಶ್ರೀನಿಜಗುಣಾನಂದ ಸ್ವಾಮೀಜಿಗಳು ಬಸವ ತತ್ವ ಅನುಯಾಯಿಯಾಗಿದ್ದು, ವೈಚಾರಿಕತೆ ಬಗ್ಗೆ ತೀಕ್ಷಣವಾಗಿ ಮತ್ತು ಪ್ರಕಾರವಾಗಿ ಮಾತನಾಡುತ್ತಿದ್ದರು. ಸಮಾಜದಲ್ಲಿ ದಿನಂ ಪ್ರತಿ ನಡೆಯುತ್ತಿರುವ ಅನಾಚಾರದ ಬಗ್ಗೆ ವಸ್ತುನಿಷ್ಟವಾಗಿ ಮಾತನಾಡುತ್ತಿದ್ದರು. ರಾಜ್ಯದಾದ್ಯಂತ ತಮ್ಮ ಪ್ರವಚನದ ಮೂಲಕ ಖ್ಯಾತಿ ಗಳಿಸಿದ್ದರು.
ಇಂತಹ ಬೆದರಿಕೆಗೆ ಹೆದರಲ್ಲ
ನನ್ನನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ. ಇಂತಹ ಬೆದರಿಕೆಗೆ ನಾನು ಹೆದರಲ್ಲ. ವೈಚಾರಿಕ ಪ್ರಜ್ಞೆ ಮೂಡಿಸುವ ಕಾರ್ಯ ಮುಂದುವರಿಸುತ್ತೇನೆ.
– ಶ್ರೀ ನಿಜಗುಣಾನಂದ ಸ್ವಾಮೀಜಿ
ನಿಜಗುಣಾನಂದ ಸ್ವಾಮೀಜಿ ಮಾತ್ರವಲ್ಲದೆ, ಬಜರಂಗದಳದ ಮಾಜಿ ನಾಯಕ ಮಹೇಂದ್ರಕುಮಾರ್, ನಿಡುಮಾಮಿಡಿ ವೀರಭದ್ರ ಸ್ವಾಮೀಜಿ, ಚಿತ್ರನಟ ಪ್ರಕಾಶ್ ರಾಜ್, ಚೇತನಕುಮಾರ್, ಬಿ.ಟಿ. ಲಲಿತಾ ನಾಯಕ, ಮಹೇಶ್ಚಂದ್ರ ಗುರು, ಭಗವಾನ್, ದಿನೇಶ ಅಮಿನ್ ಮಟ್ಟು, ರೌಡಿ ಅಗ್ನಿ ಶ್ರೀಧರ್, ಬೃಂದಾ ಕಾರಟ್ ಹಾಗೂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ 15 ಜನರನ್ನು ಹತ್ಯೆ ಮಾಡುವುದಾಗಿ ಅನಾಮಧೇಯ ಪತ್ರದಲ್ಲಿ ಬೆದರಿಕೆ ಹಾಕಿದ್ದಾನೆ.



