ಡಿವಿಜಿಸುದ್ದಿ.ಕಾಂ, ದಾವಣಗೆರೆ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಉನ್ನತೀಕರಣ ಯೋಜನೆಯಡಿಯಲ್ಲಿ ಕನಿಷ್ಠ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಒಂದು ತಿಂಗಳ ಉಚಿತ ಬೇಸಿಕ್ ಕಂಪ್ಯೂಟರ್ ತರಬೇತಿಯನ್ನು ಏರ್ಪಡಿಸಿದೆ.
ಕಂಪ್ಯೂಟರ್ ತರಬೇತಿಯನ್ನು ಅಕ್ಟೋಬರ್ 3 ರಿಂದ ಪ್ರಾರಂಭಿಸಲಾಗುವುದು. ಆಸಕ್ತ ಅಭ್ಯರ್ಥಿಗಳು ಉದ್ಯೋಗ ವಿನಿಮಯ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ತರಬೇತಿಯ ಸದುಪಯೋಗ ಪಡೆಯಬಹುದಾಗಿದೆ. ವಿಳಾಸ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹೆಚ್ಚಿನ ಮಾಹಿತಿಗೆ: 08192-259446 ನ್ನು ಸಂಪರ್ಕಿಸಿ.



