ಡಿವಿಜಿ ಸುದ್ದಿ, ಬೆಳಗಾವಿ: ಫೆ. 22 ರಂದು ಹುಕ್ಕೇರಿ ತಾಲೂಕಿನ ಕಲ್ಯಾಣ ಹೆಬ್ಬಾಳದಲ್ಲಿ 109 ಅಡಿ ಎತ್ತರದ ಬಸವೇಶ್ವರರ ಮೂರ್ತಿ ಸ್ಥಾಪನೆಯ ಅಡಿಗಲ್ಲು ಪೂಜೆಯನ್ನು ಸಿಎಂ ಯಡಿಯೂರಪ್ಪ ನೆರವೇರಿಸಲಿದ್ದಾರೆ.
ಹುಕ್ಕೇರಿಯ ತಾಲೂಕಿನ ಕ್ಲಯಾಣ ಹೆಬ್ಬಾಳದಲ್ಲಿ ಫೆ. 21 ರಿಂದ 23 ವರಗೆ ಬಸವ ಉತ್ಸವ ನಡೆಯಲಿದ್ದು, ಈ ಉತ್ಸವದಲ್ಲಿ ಸಚಿವರು, ಕೇಂದ್ರ ಮಂತ್ರಿಗಳು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಈ ಕುರಿತು ಹೆಬ್ಬಾಳ ಗ್ರಾಮದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಸವ ಉತ್ಸವ ಸಮಿತಿಯ ನೇತೃತ್ವ ವಹಿಸಿರುವ ಬಸವ ದೇವರು ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.
ಉತ್ಸವದಲ್ಲಿ ನಾಡಿನ ಅನೇಕ ಮಠಾಧೀಶರು ಹಾಗೂ ಸಮಾಜದ ವಿವಿಧ ಸ್ಥರದ ಎಲ್ಲಾ ಜನಾಂಗದ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. 22ರಂದು ಕಲ್ಯಾಣ ಹೆಬ್ಬಾಳ ಗ್ರಾಮಕ್ಕೆ ಸಿಎಂ ಯಡಿಯೂರಪ್ಪ ಆಗಮಿಸಿ 109 ಅಡಿ ಎತ್ತರದ ಬಸವ ಮೂರ್ತಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.ಸಚಿವರಾದ ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ, ಅಣ್ಣಾ ಸಾಹೇಬ್ ಜೊಲ್ಲೆ, ಸೇರಿದಂತೆ ಕೇಂದ್ರ ಸಚಿವರಾದ ಸುರೇಶ ಅಂಗಡಿ ಹಾಗೂ ಪ್ರಹ್ಲಾದ ಜೋಶಿ ಭಾಗವಹಿಸಲಿದ್ದಾರೆ ಎಂದರು.
ಬಸವರಾಜ ಪಂಡಿತ, ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾಧ್ಯಕ್ಷಾ ಶಂಕರ ಗುಡಸ, ಎಸ್ ವಾಯ್ ಹಂಜಿ ಸಾಹಿತಿ ಚಿಕ್ಕೋಡಿ, ಬಿ.ಎಲ್ ಖೋತ, ಮಹಾಂತೇಶ ಚೌಗಲ, ಸಿದ್ದು ಪಾಟೀಲ್, ಮಹೇಶ ಕಾಡಗಿ ಸೇರಿದಂತೆ ಇತರರು ಹಾಜರಿದ್ದರು.



