Connect with us

Dvgsuddi Kannada | online news portal | Kannada news online

ಎಲ್ಲಾ ದಾನಕ್ಕಿಂತ  ರಕ್ತದಾನ ಮಹಾದಾನ: ಡಾ. ನಾಗರಾಜ್ ನಾಯಕ್

ಚನ್ನಗಿರಿ

ಎಲ್ಲಾ ದಾನಕ್ಕಿಂತ  ರಕ್ತದಾನ ಮಹಾದಾನ: ಡಾ. ನಾಗರಾಜ್ ನಾಯಕ್

ಡಿವಿಜಿಸುದ್ದಿ.ಕಾಂ. ಚನ್ನಗಿರಿ:  ರಕ್ತ ದಾನದ ಮೂಲಕ ಬೇರೆಯವರಿಗೆ ಸಹಾಯ ಮಾಡುವ  ಅವಕಾಶ   ಬೇರೆ ಯಾವ ಜೀವಿಗಳಿಗೂ ಇಲ್ಲ.   ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡು  ರಕ್ತದಾನದಂತಹ ಮಹಾ ದಾನದ ಬಗ್ಗೆ ಅವರಿವು ಮೂಡಿಸಬೇಕಿದೆ ಎಂದು ಬಸವಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ನಾಗರಾಜ್ ನಾಯಕ್ ಕರೆ ನೀಡಿದರು.

ಬಸವಾಪಟ್ಟಣದ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ  ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸಮಾಜಶಾಸ್ತ್ರ ವಿಭಾಗ ಸಯೋಗದೊಂದಿಗೆ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರು ರಕ್ತದಾನ ಮಾಡುವುದರ ಮೂಲಕ ಸಂಕಷ್ಟದಲ್ಲಿ ಇರುವವರ  ಜೀವ ಉಳಿಸಲು ನೆರವಾಗಬೇಕು. ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ರಕ್ತದಾನದಲ್ಲಿ ನಷ್ಟಕ್ಕಿಂತ ಲಾಭವೇ ಹೆಚ್ಚು. ರಕ್ತದಾನ ಮಾಡಲು ಯಾರು ಹಿಂಜರಿಕೆ ಬೇಡ ಎಂದರು.

ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಹನುಮಂತಪ್ಪ ಟಿ  ಮಾತನಾಡಿ,  ರಕ್ತವು ಆಧುನಿಕ ಸಂಜೀವಿನಿ, ಅಮೃತವಾಗಿದ್ದು ನಿಸ್ವಾರ್ಥತೆಯಿಂದ ಮಾನವನ ನೆರವಿಗೆ ಧಾವಿಸುವ ಉದಾರ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.\

ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಕುಮಾರ ಎನ್ ಮಾತನಾಡಿ,  ರಕ್ತದಾನದ ಮೂಲಕ  ಸಮಾಜಸೇವೆಗೆ ಸದಾ ಸಿದ್ಧರಾಗಿರುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಜ್ಯೋತಿ ಎನ್  ಮಾತನಾಡಿ,  ಮಾನವ ಸಮಾಜಮುಖಿಯಾಗಿ  ಸಮಾಜ ಸೇವಾ ಕಾರ್ಯದಲ್ಲಿ ತೊಡಗಿದ್ದಾಗ ನಮ್ಮ ಶಿಕ್ಷಣದ ಉದ್ದೇಶ ಈಡೇರುತ್ತದೆ. ಯಾರಿಗೆ ರಕ್ತದ ಅಗತ್ಯವಿರುತ್ತದೆಯೋ ಅವರಿಗೆ  ನೆರವು ನೀಡುವುದು ಮಾನವ ಧರ್ಮವಾಗಬೇಕು ಎಂದು ಕರೆ ನೀಡಿದರು.

ಐಕ್ಯೂ ಎಸಿ ಸಂಚಾಲಕ  ಮಧುಸೂದನ್  ಪ್ರಾಸ್ತಾವಿಕ ನುಡಿಗಳಲ್ಲಿ ವಿಶ್ವ ರಕ್ತದಾನ ದಿನಾಚರಣೆಯ ಮಹತ್ವ ಮತ್ತು ಅದರ ಉದ್ದೇಶವನ್ನು ಸವಿವರವಾಗಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಿದರು.

ಸಂಚಾಲಕ ಪ್ರಕಾಶ್ ಜಿಪಿ  ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ  ಯೋಗೇಶ್ ಕೆಜೆ,  ಶಿವರಾಜ್ ಕುಮಾರ್ , ಉಪನ್ಯಾಸಕರಾದ ಶ್ರೀ ರಾಜಪ್ಪ , ಧನಂಜಯ,  ಆಂಜನೇಯ,  ಶ್ರೀಕಾಂತ್, ಆಕಾಶ್,  ರಹ್ಮತ್ ಬಿ ಮತ್ತಿತರರು ಉಪಸ್ಥಿತರಿದ್ದರು.

 

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

0 Comments

  1. Kumara

    October 2, 2019 at 11:52 am

    Thank you very much sir

Leave a Reply

Your email address will not be published. Required fields are marked *

More in ಚನ್ನಗಿರಿ

To Top