ಡಿವಿಜಿಸುದ್ದಿ.ಕಾಂ. ದಾವಣಗೆರೆ: ಅ.15 ರಂದು ಛತ್ತಿಸ್‌ಗಢದ ರಾಜ್ಯದ ಬಿಲಾಯಿಲ್ಲಿ ನಡೆಯುವ 39 ನೇ ರಾಷ್ಟ್ರೀಯ ಸಬ್ ಜೂನಿಯರ್ ಬಾಲಕ-ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಪಂದ್ಯಾವಳಿಗೆ ಚನ್ನಗಿರಿ ತಾಲ್ಲೂಕಿನ ದೊಡ್ಡಬ್ಬಿಗೆರೆ ಗ್ರಾಮದ ಎಸ್ ಜೆ ಆರ್ ಆರ್ ಪ್ರೌಢಶಾಲೆಯ ನವೀನ ಜಿ.ಟಿ. ಮತ್ತು ಬಾಲಕಿಯರ ವಿಭಾದಲ್ಲಿ ರಕ್ಷಿತ ಡಿ.ಕೆ, ಪವಿತ್ರ ಡಿ. ಅವರು ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಸಂಸ್ಥೆಯ ಕಾರ್ಯದರ್ಶಿ ವೈ. ರಮೇಶ್ ಮತ್ತು ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಬಿ. ಜಾಧವ್ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದರು.



