ಡಿವಿಜಿ ಸುದ್ದಿ, ಬೆಂಗಳೂರು: ಪ್ರತಿ ರೈತರ ಖಾತೆಗಳಿಗೆ ತಲಾ 2,000 ಪಾವತಿಸಲು ಸೋಮವಾರ 1,000 ಕೋಟಿ ಅನುದಾನ ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ 19 ನಿಯಂತ್ರಣ ಉದ್ದೇಶದಿಂದ ಹಮ್ಮಿಕೊಂಡಿದ್ದ ಧನ್ವಂತರಿ ಯಾಗದಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾಗಿದ್ದರು. ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸುಮಾರು 50 ಲಕ್ಷ ರೈತರಿಗೆ ಇದರ ಪ್ರಯೋಜನ ಸಿಗುತ್ತದೆ. ರಾಜ್ಯದ ಹಣಕಾಸು ಸ್ಥಿತಿ ಅಷ್ಟಾಗಿ ಉತ್ತಮವಿಲ್ಲದೇ ಇದ್ದರೂ ರೈತರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ ಎಂದರು.
ಕೇಂದ್ರ ಸರ್ಕಾರ ಪ್ರತಿಯೊಬ್ಬ ರೈತನಿಗೆ ಎರಡು ಕಂತುಗಳಲ್ಲಿ ತಲಾ 3,000 ರಂತೆ ಒಟ್ಟು 6,000 ಮತ್ತು ರಾಜ್ಯ ಸರ್ಕಾರ 2,000 ರಂತೆ ಎರಡು ಕಂತುಗಳಲ್ಲಿ 4,000 ಪಾವತಿಸಲಿದೆ. ಪ್ರತಿಯೊಬ್ಬ ರೈತರಿಗೆ 10,000 ಸಿಗುತ್ತದೆ ಎಂದರು.
ಲೋಕಕಲ್ಯಾಣಾರ್ಥವಾಗಿ ಮತ್ತು ಕೊರೋನಾ ನಿಯಂತ್ರಣಕ್ಕಾಗಿ ಶಂಕರಮಠದಲ್ಲಿ ನಡೆಸಲಾಗುತ್ತಿರುವ ಶ್ರೀ ಧನ್ವಂತರಿ ಯಾಗದಲ್ಲಿ ಪಾಲ್ಗೊಳ್ಳಲಾಯಿತು. ಇದಕ್ಕೂ ಮುನ್ನ ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಸಮಸ್ತ ಜನತೆಯ ಯೋಗಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸಿಲಾಯಿತು. ಪೇಜಾವರ ಸ್ವಾಮೀಜಿ, ಸಚಿವರು, ಸಂಸದರು ಉಪಸ್ಥಿತರಿದ್ದರು. pic.twitter.com/WMsiE6qcB6
— B.S.Yediyurappa (@BSYBJP) June 16, 2020