ಕುಜಗ್ರಹಗೆ ಮಂಗಳ, ಅಂಗಾರಕ ಹಾಗೂ ಉತ್ತರ ಭಾರತದಲ್ಲಿ ಮಾಂಗಲಿಕ ಎಂದು ಹೆಸರುಗಳುಂಟು, ಹಾಗಾಗಿ ಸರ್ವೇಸಾಮಾನ್ಯವಾಗಿ ಕುಜದೋಷ, ಅಂಗಾರಕ ದೋಷ, ಮಂಗಳ ದೋಷ ಹಾಗೂ ಮಾಂಗ್ಲಿಕ್ ದೋಷ ಎಂದು ಕರೆಯುತ್ತಾರೆ.
ಪ್ರತಿಯೊಬ್ಬ ತಂದೆ ತಾಯಿ ತಮ್ಮ ಮಕ್ಕಳ ಮದುವೆ ಕಾರ್ಯ ಮಾಡುವಾಗ ಅನುಭವಿ ಜ್ಯೋತಿಷ್ಯ ಪಂಡಿತರ ಹತ್ತಿರ ಜಾತಕದ ಮಾರ್ಗದರ್ಶನ ಪಡೆದುಕೊಂಡು ಮದುವೆ ಕಾರ್ಯ ಮುಂದುವರಿಸುತ್ತಾರೆ.ಕುಜದೋಷ ವನ್ನು ಜನ್ಮಕುಂಡಲಿ ಆಧಾರ ಇಟ್ಟುಕೊಂಡು ನೋಡಬೇಕು ಜನ್ಮ ಕುಂಡಲಿಯಲ್ಲಿ ಲಗ್ನದಿಂದ ಪರೀಕ್ಷಿಸಬೇಕು ಲಗ್ನದಿಂದ 2, 4, 7,8 ಮತ್ತು 12ನೇ ಸ್ಥಾನಗಳಲ್ಲಿ ಕುಜ ಇದ್ದರೆ ಕುಜದೋಷವಾಗಿ ಮಾರ್ಪಾಡಾಗುತ್ತದೆ.
ವಧುವಿನ ಜಾತಕದಲ್ಲಿ ಕುಜ ದೋಷ ಇದ್ದರೆ ಅದೇ ದೋಷ ಇರುವ ವರನ ಜಾತಕ ನೋಡಿ ಮದುವೆ ಕಾರ್ಯ ಮಾಡುವುದು ಸೂಕ್ತ. ಈ ರೀತಿ ಮದುವೆ ಕಾರ್ಯ ಮಾಡುವುದರಿಂದ ಅವರ ದಾಂಪತ್ಯ ಜೀವನ ತುಂಬಾ ಸುಖಮಯವಾಗಿ, ಚೈತನ್ಯಶೀಲವಾಗಿ, ಸಂತಸದಿಂದ ಕುಟುಂಬದೊಂದಿಗೆ ಬಾಳುತ್ತಾರೆ. ಇನ್ನೊಂದು ವಿಶೇಷವೇನೆಂದರೆ ಕರ್ಕ ಲಗ್ನ, ಸಿಂಹಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷವಿರುವುದಿಲ್ಲ ಹಾಗೂ 12 ನೇ ಸ್ಥಾನದಲ್ಲಿ ಕುಜ ಇದ್ದರು ದೋಷವಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.9353 488403 ಜ್ಯೋತಿಷ್ಯ ಪಂಡಿತರು, ಸಂಖ್ಯಾಶಾಸ್ತ್ರ ಹಾಗೂ ವಾಸ್ತುಶಾಸ್ತ್ರ ಸಲಹೆಗಾರರು.