ನನ್ನ ಜನರನ್ನು ಕಾಡದಿರು, ಕಳವಳಿಸದಿರು, ಆಕ್ರಮಿಸದಿರು, ಹರಿದಾಡದಿರು, ಕೊಲ್ಲದಿರು…
ಕರುಣೆ ಇಲ್ಲವೇ ನಿನಗೆ …?
ಮಸಣದಿ ನನ್ನವರು ತನ್ನವರೆಂಬ ಮಂದಿಗಳೇ ಇಲ್ಲದೇ ಅನಾಥ ಭಾವದಲಿ ಬೂದಿಯಾಗುವ ಆ ಶವಗಳ ಆಕ್ರಂದನ ಕೇಳುತ್ತಿಲ್ಲವೇ…?
ಜನರ ಮನದೊಳಗಿನ ಭಯ ಕಾಣುತ್ತಿಲ್ಲವೇ…?
ನಿನ್ನ ಅಟ್ಟಹಾಸವ ಹುಟ್ಟಡಗಿಸುವ ನನ್ನ ಮಿತ್ರನೊರ್ವ ಬರುವುದು ಇನ್ನೂ ಸ್ವಲ್ಪ ತಡವಾಗಬಹುದೇನೊ!!
ಅದಕ್ಕಾಗಿ ನಾನೇ ನನ್ನೊಳಗಿನ ಬುದ್ಧನೊಲುಮೆ ಇಂದಲೇ ಬೇಡುವೆನು ನಿನ್ನ…
ದಯಮಾಡಿ ಕೃಪೆ ತೋರಿ ಕರುಣಿಸು,
ನನ್ನನ್ನೂ ಸೇರಿ ನನ್ನ ಕೆಲ ಜನರು ನಿನ್ನಿಂದ ಕಲಿತಿದ್ದೇವೆ ಒಂದಿಷ್ಟು…
ಅದಕ್ಕಾಗಿ ಆ ಕಾಳಜಿಯ ಕನಿಕರದಿ ಹೇಳುತಿರುವೇ ನಾನು…
ಸಾಕು ನನ್ನ ಜನರನ್ನು ಜೀವಿಸಲು ಬಿಡು…
ಹೇ ಕಾಣದ ಕರಾಳವೇ..,
ಸ್ವತಂತ್ರ ನೀಡೆಲ್ಲರಿಗೆ…
ಸ್ವತಂತ್ರ ನೀಡೆಲ್ಲರಿಗೆ…
✍🏻 ರಾಘು ದೊಡ್ಡಮನಿ, ದಾವಣಗೆರೆ
ಮೊ: 9844363474



