ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ಭೀತಿಯಿಂದ ಲಾಕ್‌ಡೌನ್ ಹಿನ್ನಲೆ ಸೂಕ್ತ ಮಾರುಕಟ್ಟೆ ಇಲ್ಲದೆ, ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ರಸ್ತೆಗೆ ಚೆಲ್ಲುವುದಾಗಲಿ, ನಾಶ ಮಾಡುವುದಾಗಲಿ ಮಾಡಬೇಡಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಮನವಿ ಮಾಡಿದ್ದಾರೆ.
ಕೊರೊನಾ ಹಿನ್ನೆಯಲ್ಲಿ 21 ದಿನಗಳ ಕಾಲ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಾಗಿ ರೈತರ ಬೆಳೆಯನ್ನು ಯಾರು ಖರೀದಿ ಮಾಡಲು ಮುಂದೆ ಬರುತ್ತಿಲ್ಲ. ಇದರಿಂದ ಸಂಕಷ್ಟಕ್ಕೆ ಸಿಲುಕಿದ ರೈತರು ಬೆಳೆದ ಬೆಳೆಗಳನ್ನು ರಸ್ತೆಗೆ ಚೆಲ್ಲಿ ನಾಶ ಮಾಡುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಯಾರಿಗೂ ಲಾಭವಿಲ್ಲ ಎಂದರು.
ರಾಯಚೂರು ಕೊಪ್ಪಳ ಮೈಸೂರಿನ ಕೆಲ ಭಾಗ ಸೇರಿದಂತೆ ಹಲವೆಡೆ ಬತ್ತ ಕಟಾವಿಗೆ ಬಂದಿದೆ. ಯಂತ್ರೋಪಕರಣಕ್ಕೆ ಗಡಿಯಲ್ಲಿ ನಿಲ್ಲಿಸಬಾರದು. ರೈತರಿಗೆ ಬೇಕಾದ ಬೀಜ, ಗೊಬ್ಬರ ಔಷಧಿ ಮಾರಾಟಕ್ಕೆ ಮುಕ್ತ ಅವಕಾಶ ಪೈಪ್ ಅಂಗಡಿಗಳನ್ನುತೆರಯಲು ಮಾರಾಟ ಮಾಡಲು ಯಾವುದೇ ಅಡೆತಡೆಯಿಲ್ಲ.
ಮುಂಗಾರು ಬಿತ್ತನೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಎಲ್ಲಾ ದಿನಸಿ ತರಕಾರಿ ಅಂಗಡಿ ತೆರೆದಿವೆ. ರೈತರ ಜೀವ ಕುಟುಂಬದ ಹೊಣೆ ಅವರ ಮೇಲಿದ್ದು, ರೈತರು ಆರೋಗ್ಯದ ದೃಷ್ಟಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕು ಎಂದಿದ್ದಾರೆ.
ಕಲ್ಲಂಗಡಿ ಹಣ್ಣಾಗಲೀ ಅನಾನಸ್ ಆಗಲಿ ತಿಂದರೆ ಕೊರೊನಾ ಬರುವುದಿಲ್ಲ. ಇಂತಹ ತಪ್ಪು ಮಾಹಿತಿ ಅಪಪ್ರಚಾರಕ್ಕೆ ಬೆಲೆಕೊಡಬಾರದು. ನಿಂಬೆಹಣ್ಣು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿದೆ. ಕಲ್ಲಂಗಡಿ ಅನಾನಸ್ ನಿಂಬೆಹಣ್ದು ಉಪಯೋಗಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಮಾಹಿತಿ ನೀಡಿದರು.
ಆತುರಕ್ಕೆ ಒಳಗಾಗಿ ಅಪಪ್ರಚಾರಕ್ಕಾಗಲಿ ರೈತರು ಕಿವಿಕೊಡಬಾರದು. ಯಾವುದೇ ಕಾರಣಕ್ಕೂ ಬೆಳೆಗಳನ್ನು ನಾಶ ಮಾಡುವುದಾಗಲಿ ರಸ್ತೆಗೆ ಸುರಿಯುವುದಾಗಲೀ ಮಾಡಬಾರದು. ಶಿಥಲೀಕರಣ ಘಟಕ ,ಎಪಿಎಂಸಿ ವ್ಯವಸ್ಥೆ ಬಳಸಿಕೊಳ್ಳಬೇಕು ಎಂದು ರೈತರಲ್ಲಿ ಮನವಿ ಮಾಡಿದ್ದಾರೆ



