ಡಿವಿಜಿ ಸುದ್ದಿ, ದಾವಣಗೆರೆ: ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮಂತ್ರಾಲಯದ 2019-20 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಉಚಿತ ತೆಂಗಿನ ಮರ ಹತ್ತುವ ಮತ್ತು ಸಸ್ಯ ಸಂರಕ್ಷಣೆ ಕೌಶಲ್ಯಾಭಿವೃದ್ಧಿಯ 21 ದಿನದ ತರಬೇತಿಯನ್ನು ಆಯೋಜಿಸಿದೆ.
ತರಬೇತಿಗೆ ಒಟ್ಟು 20 ಜನ ಆಸಕ್ತ ರೈತರುಗಳನ್ನು ಹಾಗೂ ಗ್ರಾಮೀಣ ಯುವಕರುಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಆಸಕ್ತರು ಕನಿಷ್ಠ 5 ನೇ ತರಗತಿ ಪಾಸಾಗಿರಬೇಕು. ವಯೋಮಿತಿ 18 ರಿಂದ 40 ವರ್ಷವಾಗಿದೆ. ಆಸಕ್ತರು ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯ ಜತೆಗೆ ಮರುಪಾವತಿಸಲಾಗುವ ಮುಂಗಡ ಹಣ ರೂ. 500 ಗಳನ್ನು ನೀಡಿ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಡಿ.15 ರೊಳಗೆ ಸಲ್ಲಿಸಲು ಈ ಮೂಲಕ ಕೋರಲಾಗಿದೆ.
ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ತರಬೇತಿಯ ಸಮಯದಲ್ಲಿ ಉಚಿತ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ ರಘುರಾಜ ಜೆ ಸಂಪರ್ಕಿಸಿ. ಮೊಬೈಲ್ ನಂಬರ್: 9449833583, 9449856876.



