ಡಿವಿಜಿ ಸುದ್ದಿ, ಯಾದಗಿರಿ: ಅಕಾಲಿಕ ಮಳೆ, ಗಾಳಿಗೆ ಸಂಭವಿಸಿದ ಬೆಳೆ ಹಾನಿಗೆ ರೈತರ ಜಮೀನು ಸರ್ವೇ ಬಳಿಕ ಪರಿಹಾರ ನೀಡುವ ಚಿಂತನೆ ನಡೆಸಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅನ್ನದಾತರಿಗೆ ಭರವಸೆ ನೀಡಿದ್ದಾರೆ.
ರೈತರ ಬೆಳೆ ಹಾನಿ ಸಮಸ್ಯೆ ಬಗ್ಗೆ ಸಿಎಂ ಗಮನಕ್ಕೆ ತರಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಪರಿಹಾರ ನೀಡಲಿದೆ. ರೈತರಿಗೆ ಲಾಕ್‍ಡೌನ್ ಸಮಸ್ಯೆ ಇಲ್ಲ. ರೈತರು ಬೆಳೆದ ತರಕಾರಿ, ಹಣ್ಣು-ಹಂಪಲು ಮಾರಾಟಕ್ಕೆ ಯಾವುದೇ ನಿರ್ಬಂಧ ಇಲ್ಲ. ರೈತರಿಗೆ ಮುಕ್ತವಾಗಿ ಮಾರಾಟಕ್ಕೆ ಅನುವು ಮಾಡಿಕೊಟ್ಟಿದ್ದೇವೆ ಎಂದು ಸಚಿವರು ತಿಳಿಸಿದರು.
ರೈತರ ಬೆಳೆ ವಿಮೆಯಲ್ಲಿ ಕೆಲವೊಂದು ದೋಷ ಆಗಿರೊದು ನಿಜ. ಜಿಪಿಎಸ್ ದೋಷದಿಂದ ಕೆಲವು ಸಮಸ್ಯೆ ಆಗಿವೆ. ಆದರೆ ಅಧಿಕಾರಿಗಳು ರಿ-ಸರ್ವೇ ಮಾಡಿ, ಪರಿಶೀಲಿಸಿ ಎಲ್ಲವನ್ನು ಸರಿ ಮಾಡುತ್ತಾರೆ ಎಂದರು.



