ಡಿವಿಜಿ ಸುದ್ದಿ, ಹಾವೇರಿ: ಹಿಂದೂ ದೇವಾಲಯಗಳ ರಕ್ಷಣೆ ಹಾಗೂ ವ್ಯವಸ್ಥಿತ ನಿರ್ವಹಣೆಗೆ ಎಲ್ಲಾ ದೇವಾಲಯಗಳಿಗೂ ಆಡಳಿತಾಧಿಕಾರಿ ನೇಮಕ ಮಾಡಲಾಗುವುದು ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 34 ಸಾವಿರ ದೇವಾಲಯಗಳಿದ್ದು, 100 ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದಲ್ಲಿ ಒಂದು ಸಾವಿರ ಎ, ಬಿ ದರ್ಜೆಯ ದೇವಾಲಯಗಳಿದ್ದು, ಉಳಿದಂತೆ 33 ಸಾವಿರ ಸಿ ದರ್ಜೆಯ ದೇವಾಲಯಗಳಿವೆ ಎಂದರು.
ಎ ದರ್ಜೆಯ ದೇವಾಲಯಗಳಿಗೆ ಉಪ ವಿಭಾಗಧಿಕಾರಿ, ಬಿ ದರ್ಜೆಗೆ ಕಂದಾಯ ನಿರೀಕ್ಷಕ, ಸಿ ದರ್ಜೆಗೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ಒಂದು ತಿಂಗಳಲ್ಲಿ ನೇಮಿಸಲಾಗುವುದು. ಎ ದರ್ಜೆಯ ದೇವಾಲಯಗಳಲ್ಲಿ ಗೋ ರಕ್ಷಣಾ ಕೇಂದ್ರ ತೆರೆಯಲಾಗುವುದು ಎಂದು ತಿಳಿಸಿದರು.



