ಡಿವಿಜಿ ಸುದ್ದಿ, ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಲಾಕ್‍ಡೌನ್ ಸಂಕಷ್ಟ ಸಮಯದಲ್ಲಿ ಬಡವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಇದೀಗ ಕೆಳೆದ ಮೂರ್ನಾಲ್ಕು ವರ್ಷಗಳಿಂದ ಮನೆಗೆ ಬೆಳಕಿಲ್ಲದೆ ಕತ್ತಲಲ್ಲಿ ಜೀವನ ನಡೆಸುತ್ತಿದ್ದವರಿಗೆ ಸುದೀಪ್ ಬೆಳಕಾಗುವ ಮೂಲಕ ಸಹಾಯದ ಹಸ್ತ ಚಾಚಿದ್ದಾರೆ.
ಸುದೀಪ್ ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಅನೇಕರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ . ಇದೀಗ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ವೃದ್ಧ ದಂಪತಿಗೆ ಸಹಾಯ ಮಾಡಿದ್ದಾರೆ.
ಇಂದು..
ಕತ್ತಲೆಯ ಕಪಿಮುಷ್ಟಿಯಲ್ಲಿ ವರ್ಷಗಳ ಯಾತನೆ ಅನುಭವಿಸಿದ .ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ.. ಸಿದ್ದಾಪುರ ಎಂಬ ಗ್ರಾಮದ ಎರಡು ಹಿರಿಯ ಜೀವಗಳಾದ ನಾಗರಾಜು..ರಾಧಮ್ಮ ಮತ್ತು ವಿಶೇಷಚೇತನ ಮಗ ಪವನ್ ರವರ ಬಾಳಿಗೆ ಬೆಳಕಾದ ಸಾರ್ಥಕ ಕ್ಷಣ.@KicchaSudeep @KSCS_Official #ಮೊದಲು_ಮಾನವನಾಗು#KichchaSudeepaCharitableSociety pic.twitter.com/zXID9NiKOe— Ramesh Kitty (@Kitty_R7) August 3, 2020
ವೃದ್ಧ ದಂಪತಿ ಮೂರು ವರ್ಷಗಳ ಹಿಂದೆ ಮನೆ ಕಟ್ಟಿಸಿಕೊಂಡಿದ್ದರು. ಆದರೆ ಅದಕ್ಕೆ ವಿದ್ಯುತ್ ಸಂಪರ್ಕ ಮಾಡಿಕೊಳ್ಳಲಾಗದೆ ಅಂದಿನಿಂದ ಅಂದರೆ ಸುಮಾರು ಮೂರು ವರ್ಷದಿಂದ ಕತ್ತಲಲ್ಲಿಯೇ ಜೀವನ ಸಾಗಿಸುತ್ತಿದ್ದರು. ಈ ವಿಷಯ ಸುದೀಪ್ ಚಾರಿಟೇಬಲ್ ಟ್ರಸ್ಟ್ ಗಮನಕ್ಕೆ ಬಂದಿದೆ.

ಟ್ರಸ್ಟ್‍ನ ಯುವಕರು ತಕ್ಷಣ ವೃದ್ಧ ದಂಪತಿಯಾದ ರಾಧಮ್ಮ ಹಾಗೂ ನಾಗರಾಜು ಅವರ ಮನೆಗೆ ಭೇಟಿ ನೀಡಿದ್ದಾರೆ. ನಂತರ ಅವರ ಸಮಸ್ಯೆಯನ್ನು ಆಲಿಸಿ, ತಾವೇ ತಮ್ಮ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಹಾಕಿಸಿಕೊಟ್ಟಿದ್ದಾರೆ. ಅಲ್ಲದೇ ವಿದ್ಯುತ್ ಸಂಪರ್ಕಕ್ಕೆ ಬೇಕಾದ ಅನುಮತಿಗಳನ್ನೂ ಕೊಡಿಸಿದ್ದಾರೆ.
ವೃದ್ಧ ದಂಪತಿ ತಮ್ಮ ವಿಕಲಾಂಗ ಮೊಮ್ಮಗನೊಂದಿಗೆ ವಾಸಿಸುತ್ತಿದ್ದಾರೆ. ಟ್ರಸ್ಟ್ ಮೂಲಕ ಸುದೀಪ್ ಸಹಾಯ ಮಾಡಿದ್ದಕ್ಕೆ ಕಿಚ್ಚನಿಗೆ ಮತ್ತು ಟ್ರಸ್ಟ್ ಯುವಕರಿಗೆ ವೃದ್ಧ ದಂಪತಿ ಕೈಮುಗಿದು ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಗಳು ವೃದ್ಧ ದಂಪತಿಗೆ ಸಹಾಯ ಮಾಡಿರುವ ವಿಡಿಯೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದು, ಸುದೀಪ್ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.



