ಡಿವಿಜಿ ಸುದ್ದಿ, ಬೆಂಗಳೂರು: ಎಸಿಬಿ ಅಧಿಕಾರಿಗಳು ಕರ್ನಾಟಕ ವಾಲ್ಮಿಕಿ ಅಭಿವೃದ್ಧಿ ನಿಗಮದ ಜನರಲ್ ಮ್ಯಾನೇಜರ್ ಮನೆಯಲ್ಲಿ ಎಸಿಬಿ ದಾಳಿ ಮಾಡಿದ್ದು, 82 ಲಕ್ಷ ವಶಕ್ಕೆ ಪಡೆದಿದ್ದಾರೆ.
ಕಳೆದ ಮೂರು ದಿನಗಳಿಂದ ಕರ್ನಾಟಕ ವಾಲ್ಮಿಕಿ ಅಭಿವೃದ್ಧಿ ನಿಗಮ, ಅಧಿಕಾರಿಗಳ ಮನೆಯಲ್ಲಿ ಕಾರ್ಯಾಚರಣೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ಮಾಡುತ್ತಿದ್ದಾರೆ. ಗುರುವಾರ 22 ಲಕ್ಷ ನಗದು ಹಣವನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇಂದು ನಿಗಮದ ಜನರಲ್ ಮ್ಯಾನೇಜರ್ ನಾಗೇಶ್ ಮತ್ತು ಅಧಿಕಾರಿ ಸುಬ್ಬಯ್ಯ ಮನೆ ಮೇಲೆ ದಾಳಿ ಮಾಡಿದ್ದಾರೆ.

ನಾಗೇಶ್ ಮನೆಯಲ್ಲಿ ಎಸಿಬಿ ಅಧಿಕಾರಿಗಳು 82 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ. ಸದ್ಯಕ್ಕೆ ಎಸಿಬಿ ಅಧಿಕಾರಿಗಳು ನಾಗೇಶ್ ಮತ್ತು ಸುಬ್ಬಯ್ಯ ಇಬ್ಬರನ್ನು ಬಂಧಿಸಿದ್ದಾರೆ.
ಕರ್ನಾಟಕ ವಾಲ್ಮಿಕಿ ಅಭಿವೃದ್ಧಿ ನಿಗಮದಿಂದ ಹಣ ಮಂಜೂರು ಮಾಡಿಕೊಂಡು, ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದರು ಎಂಬ ಆರೋಪಿ ಕೇಳಿ ಬಂದಿತ್ತು. ಜನರಿಂದ ಬಂದ ಹಣವನ್ನು ಹಂಚಿಕೊಳ್ಳುವಾಗ ಬೆಂಗಳೂರಿನ ವಸಂತ್‍ನಗರದಲ್ಲಿರುವ ವಾಲ್ಮಿಕಿ ಅಭಿವೃದ್ಧಿ ನಿಗಮದ ಮೇಲೆ ಎಸಿಬಿ ದಾಳಿ ಮಾಡಿತ್ತು. ಆಗ ಜನರಲ್ ಮ್ಯಾನೇಜರ್ ನಾಗೇಶ್ ಮತ್ತು ಅಧಿಕಾರಿ ಸುಬ್ಬಯ್ಯ ಸಿಕ್ಕಿಬಿದ್ದಿದ್ದರು.



