ಡಿವಿಜಿಸುದ್ದಿ.ಕಾಂ, ಹರಿಹರ: ನಗರದ ರೈಲ್ವೆ ನಿಲ್ದಾಣದಲ್ಲಿ ಗುರವಾರ ಸಂಜೆ 6-30ಕ್ಕೆ ಹೊಸಪೇಟೆಯಿಂದ ಹರಿಹರಕ್ಕೆ ಬಂದ ನೂತನ ಪ್ಯಾಸೆಂಜರ್ ರೈಲನ್ನು ಶಾಸಕ ಎಸ್. ರಾಮಪ್ಪ ಬರಮಾಡಿಕೊಂಡರು. ಇಂದು ಹೊಸಪೇಟೆಯಲ್ಲಿ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರು ನೂತನ ಹೊಸಪೇಟೆ –ಹರಿಹರ ರೈಲ್ವೆಗೆ ಚಾಲನೆ ನೀಡಿದ್ದರು . ನಾಳೆಯಿಂದ ಪ್ರತಿ ದಿನ ಹೊಸಪೇಟೆ ಮತ್ತು ಹರಿಹರ ಮಾರ್ಗವಾಗಿ ನೂತನ ರೈಲು ಸಂಚರಿಸಲಿದೆ.
ಈ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಮಹಬೂಬ್ ಬಾಷ, ವಸಂತ ಎಸ್.ಎಂ, ಕೆ.ಮರಿದೇವ, ಸಿದ್ಧರಾಜ, ದಾದಾಪೀರ ಭಾನುವಳ್ಳಿ, ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.