ಡಿವಿಜಿಸುದ್ದಿ.ಕಾಂ, ದಾವಣಗೆರೆ: ಜಿಲ್ಲೆಯ ದೇವರಹಳ್ಳಿಯ ಜವಾಹರ್ ನವೋದಯ ವಿದ್ಯಾಲಯದ 2020-21 ನೇ ಸಾಲಿಗೆ 6ನೇ ತರಗತಿಗೆ ಪ್ರವೇಶ ಪಡೆಯಲು ಸರ್ಕಾರಿ ಹಾಗೂ ಮಾನ್ಯತೆ ಪಡೆದ ಶಾಲೆಗಳ ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಸೆ.೩೦ ರವರೆಗೆ ವಿಸ್ತರಿಸಲಾಗಿದೆ.
5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಅರ್ಜಿ ನಮೂನೆಯನ್ನು ನವೋದಯ ವಿದ್ಯಾಲಯ ವೆಬ್ ಸೈಟ್ www.navodaya.gov.in ನಲ್ಲಿ ಪಡೆದು, ಮುಖ್ಯೋಪಾಧ್ಯಾಯರಿಂದ ಸಹಿ ಪಡೆದುಕೊಂಡು ಸಲ್ಲಿಸಬಹುದಾಗಿದೆ.