ಡಿವಿಜಿಸುದ್ದಿ ಕಾಂ, ದಾವಣಗೆರೆ: ಮೋಟರ್ ವಾಹನ ಕಾಯ್ದೆ ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆ ನೇತೃತ್ವದಲ್ಲಿ ಜಯದೇವ ಸರ್ಕಲ್ ನಿಂದ ಉಪವಿಭಾಗ ಕಚೇರಿ ವರೆಗೆರ ಹೆಲ್ಮೆಟ್ ಧರಿಸಿ ಕಾಲ್ನೆಡಿಗೆ ಜಾಥಾ ನಡೆಸುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು.

ರೈತ ಸಂಘ, ವಿದ್ಯಾರ್ಥಿ ಸಂಘಟನೆ, ಎಡಪಕ್ಷ, ಕಾಂಗ್ರೆಸ್ ಪಕ್ಷ, ಕನ್ನಡ ಪರ ಸಂಘಟನೆ, ಆಟೋ, ಟ್ಯಾಕ್ಸಿ, ಲಾರಿ ಚಾಲಕರ ಸಂಘಟನೆ ಸೇರಿದಂತೆ ಪಕ್ಷಾತೀತವಾಗಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ಭಾಗಿಯಾಗಿದ್ದರು. ನೂತನ ಮೋಟರ್ ವಾಹನ ಕಾಯ್ದೆ ಜಾರಿಗೆ ತಂದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರದ ನಿಯಮಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ನಿಯಮ ಜಾರಿಗೆ ಸಮಯಾವಕಾಶ ನೀಡಬೇಕೆಂದು ಆಗ್ರಹಿಸಿದರು.

ಹೆಲ್ಮೆಟ್ ಧರಿಸಿದ ಪ್ರತಿಭಟನಕಾರರು ಜಯದೇವ ವೃತ್ತದಿಂದ ಪಿಬಿ ರಸ್ತೆ ಮೂಲಕ ಉಪ ವಿಭಾಗೀಯ ಅಧಿಕಾರಿ ಕಚೇರಿ ವರೆಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಕೂಡಲೇ ಮೋಟರ್ ವಾಹನ ಕಾಯ್ದೆ ನೂತನ ದರವನ್ನು ಹಿಂಪಡೆಯಬೇಕೆಂದು ಉಪ ವಿಭಾಗೀಯ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ನೂತನ ಕಾಯ್ದೆಯಿಂದ ಜನ ಸಾಮಾನ್ಯರಗೆ ಭಾರೀ ತೊಂದರೆ ಆಗುತ್ತಿದ್ದು, ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಮಾರ್ಪಡು ಮಾಡಬೇಕು. ನಿಯಮ ಉಲ್ಲಂಘನೆಯ ದಂಡದ ಪ್ರಮಾಣವನ್ನು ಕಡಿಮೆ ಮಾಡುವ ಅವಕಾಶ ರಾಜ್ಯ ಸರ್ಕಾರಕ್ಕೆ ಇದ್ದು, ಈ ಕೂಡಲೇ ಮುಖ್ಯಮಂತ್ರಿಗಳು ಮೋಟರ್ ವಾಹನ ತಿದ್ದುಪಡಿ ಕಾಯ್ದೆಯ ದಂಡದ ಪ್ರಮಾಣವನ್ನು ಕಡಿಮೆ ಮಾಡಬೇಕು ಪ್ರತಿಭಟನಕಾರರು ಒತ್ತಾಯಿಸಿದರು.

ಎಡಪಕ್ಷದ ಹಿರಿಯ ಮುಖಂಡ ರಾಮಚಂದ್ರಪ್ಪ ಮಾತನಾಡಿ, ನೂತನ ದಂಡದಿಂದ ಬಡವರು, ರೈತರು, ಕೂಲಿ ಕಾರ್ಮಿಕರು ದುಡಿದ ಹಣವವನ್ನೆಲ್ಲ ದಂಡದ ರೂಪದಲ್ಲಿ ಕಟ್ಟುವಂತಾಗಿದೆ. ಕಾಯ್ದೆಯನ್ನು ಹಿಂಪಡೆದು ಹಿಂದೆ ಇದ್ದ ದರವನ್ನೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಪಾಲಿಕೆ ಮಾಜಿ ಸದಸಯ ಉಮೇಶ್, ಕಾಂಗ್ರೆಸ್ ಮುಖಂಡ ಎ. ನಾಗರಾಜ್, ಯುವ ಮುಖಂಡ ಎಲ್.ಎಚ್. ಸಾಗರ್, ಜಿಲ್ಲಾ ವರದಿಗಾರರ ಒಕ್ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್, ಕನ್ನಡ ಪರ ಹೋರಾಟಗಾರದ ಯಲ್ಲಪ್ಪ, ರಾಮೇಗೌಡ, ಜಗದೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



