ಡಿವಿಜಿಸುದ್ದಿ.ಕಾಂ.ದಾವಣಗೆರೆ: ಸಿದ್ಧವೀರಪ್ಪ ಬಡಾವಣೆಯ ಬಿಎಸ್ ಎನ್ ಎಲ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹನುಮಂತಪ್ಪ ಅವರ ಲ್ಯಾಬರ್ ಡಾಬ್ ಜಾತಿಯ ‘ಕ್ರೊನಿ’ ನಾಯಿ ಕಳೆದ ಒಂದು ವಾರದಿಂದ ಮಿಸ್ಸಿಂಗ್ ಆಗಿತ್ತು.

ಈ ಸುದ್ದಿ ದಾವಣಗೆರೆ ಸೋಷಿಯಲ್ ಮೀಡಿಯಾ ಗ್ರೂಪ್ ನಲ್ಲಿ ಹರಿದಾಡುತ್ತಿತ್ತು. ಡಿವಿಜಿಸುದ್ದಿ ವಾಟ್ಸ್ ಆಪ್ ಗ್ರೂಪ್ ನಲ್ಲಿಯೂ ಕ್ರೊನಿ ಪೋಟೋ ವೈರಲ್ ಆದ ತಕ್ಷಣ, ಗಾಂಧಿನಗರದ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದ ಕ್ರೊನಿ ಕೊನೆಗೂ ತಮ್ಮ ಮಾಲೀಕನ ಕೈ ಸೇರಿದೆ.

ಕ್ರೊನಿ ಮಿಸ್ಸಿಂಗ್ ಕುರಿತ ಪೋಟೋ ಸಹಿತ ಇದ್ದ ನಂಬರ್ ಗೆ ಪೋನ್ ಮಾಡಿದ ಗಾಂಧಿನಗರ ನಿವಾಸಿಗಳು ಕ್ರೋನಿಯನ್ನು ಅದರ ಮಾಲೀಕರಿಗೆ ಒಪ್ಪಿಸಿದ್ದಾರೆ. ಡಿವಿಜಿ ಸುದ್ದಿಯ ವಾಟ್ಸ್ ಆಪ್ ಗ್ರೂಪ್ ಸಹಾಯದಿಂದ ಕ್ರೋನಿ ಮತ್ತೆ ತನ್ನ ಗೂಡಿಗೆ ಸೇರಿದೆ. ಇದಕ್ಕೆ ಕ್ರೋನಿ ಮನೆವರು ಡಿವಿಜಿ ಸುದ್ದಿಗೆ ಧನ್ಯವಾದ ಹೇಳಿದ್ದಾರೆ.



