ಶಿವಮೊಗ್ಗ: ಸಾಣೀಹಳ್ಳಿಯ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನಾಳೆ ಶಿವಮೊಗ್ಗದಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ಪೂರ್ವಭಾವಿಯಾಗಿ ಸಹಮತ ವೇದಿಕೆ ವತಿಯಿಂದ ಪದವಿ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ವಚನಗಾಯನ,ವಚನ ಭಾಷಣ, ವಚನ ಪ್ರಬಂಧ ಹಾಗೂ ವಚನ ರಸಪ್ರಶ್ನೆ ಕಾರ್ಯಕ್ರಮವನ್ನು ಡಿವಿಎಸ್ ಕಾಲೇಜ್ ನಲ್ಲಿ ಆಯೋಜಿಸಲಾಗಿತ್ತು.
ಅತ್ಯಂತ ಉತ್ಸಾಹದಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. 200 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು, ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಸಹಮತ ವೇದಿಕೆಯಿಂದ ಪ್ರಮಾಣ ಪತ್ರ ವಿತರಿಸಲಾಯಿತು. ಇನ್ನು ವಿಜೇತರಿಗೆ ಶನಿವಾರ ನಡೆಯುವ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು. ಸಹಮತ ವೇದಿಕೆಯ ಸಂಚಾಲಕ ಡಾ. ಶೇಖರ್ ಗೌಳೇರ , ಕಾಂತೇಶ್ ಕದರಮಂಡಲಗಿ, ಬಾನಂದೂರು ಪ್ರಕಾಶ್, ಹೆಚ್.ಎನ್. ಮಹಾರುದ್ರಪ್ಪ, ಹೆಚ್.ಸಿ.ಯೋಗೇಶ್, ಜಗದೀಶ್ ನ್ಯಾಮತಿ, ಶಿವಯೋಗಿ ಹಂಚಿನಮನೆ, ಡಿ.ವಿ.ಎಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಭಾಗಿಯಾಗಿದ್ದರು