ದಾವಣಗೆರೆ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧನ ಮಾಡಿದ್ದು, 1,50,000/-ರೂ ಮೌಲ್ಯದ 5ಕೆ.ಜಿ.800 ಗ್ರಾಂ ಗಾಂಜಾ ಸೋಪ್ಪನ್ನು ಹಾಗೂ 600 ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ವಿದ್ಯಾನಗರ ಠಾಣಾ ಸರಹದ್ದಿನ ಆಂಜನೇಯ ಬಡಾವಣೆ 12ನೇ ಕ್ರಾಸ್ ನಲ್ಲಿರುವ ಮನೆಯೊಂದರ ಮೇಲ್ಬಾಗದ ರೂಂನಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ಮಾಡುವ ಸಲುವಾಗಿ ಅಕ್ರಮವಾಗಿ ಗಾಂಜಾ ಸೋಪ್ಪನ್ನು ಸಂಗ್ರಹಮಾಡಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ ಬಸರಗಿ ರವರು ಹಾಗೂ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ದಾಳಿ ನಡೆಸಿದೆ. ಶಿವಾಸ್ ಎಸ್ (26), 2) ಮನೋಜ್ ಜಿ.ಯು (26), 3) ವಿಶ್ವನಾಥ್ ಪೂಜಾರ್ (26)ಬಂಧಿತ ಆರೋಪಿಗಳಾಗಿದ್ದು, ಎಲ್ಲರು ದಾವಣಗೆರೆ ನಗರದ ವಾಸಿಗಳಾಗಿದ್ದಾರೆ. ಆರೋಪಿಗಳಿಂದ ಸುಮಾರು 1,50,000/- ರೂ ಮೌಲ್ಯದ 5ಕೆ.ಜಿ.800 ಗ್ರಾಂ ಗಾಂಜಾ ಸೋಪ್ಪನ್ನು ಹಾಗೂ 600 ನಗದು ಹಣ, ಗಾಂಜಾ ಸೇವನೆಗೆ ಬಳಸಿದ್ದ 02 ಚೀಲುಮೆಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ NDPS Act 1985 ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಈ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳಾದ ವಿದ್ಯಾನಗರ ಪೊಲೀಸ್ ಠಾಣೆಯ ತನಿಖಾಧಿಕಾರಿ ಪ್ರಭಾವತಿ ಸಿ. ಶೇತಸನದಿ ಪೊಲೀಸ್ ಇನ್ಸ್ ಪೆಕ್ಟರ್ ರೇಣುಕಾ ಜಿ.ಎ, ಪಿಎಸ್ ಐ ವಿಜಯ ಹಾಗೂ ಸಿಬ್ಬಂದಿಗಳಾದ ಲಕ್ಷ್ಮಣ್.ಆರ್. ನಾಗರಾಜ ಕೂಲೇರ, ಮಂಜುನಾಥ.ಬಿ.ವಿ.ಲೋಹಿತ ಎಸ್. ಗಿರಿಧರ.ಎಲ್. ಬುಡೇನ್‌ವಲಿ, ಗೋಪಿನಾಥ ಬಿ ನಾಯ್ಕ, ಅಜ್ಜಯ್ಯ ಎ.ಆರ್.ಎಸ್.ಐ ಇವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



