Connect with us

Dvgsuddi Kannada | online news portal | Kannada news online

ಕುರಿ, ಮೇಕೆ ಸಾಕಾಣಿಕೆ ಫ್ಲ್ಯಾನ್ ಇದ್ಯಾ..! ಇಲ್ಲಿದೆ ಸರ್ಕಾರದ ವತಿಯಿಂದ ಉಚಿತ ತರಬೇತಿ

ಪ್ರಮುಖ ಸುದ್ದಿ

ಕುರಿ, ಮೇಕೆ ಸಾಕಾಣಿಕೆ ಫ್ಲ್ಯಾನ್ ಇದ್ಯಾ..! ಇಲ್ಲಿದೆ ಸರ್ಕಾರದ ವತಿಯಿಂದ ಉಚಿತ ತರಬೇತಿ

ದಾವಣಗೆರೆ: ನಿಮಗೆ ಕುರಿ, ಮೇಕೆ ಸಾಕಾಣಿಕೆ ಫ್ಲ್ಯಾನ್ ಏನಾದ್ರೂ ಇದ್ಯಾ..ಇದೀಗ ಸರ್ಕಾರದ ವತಿಯಿಂದಲೇ ಕುರಿ, ಮೇಕೆ ಸಾಕಾಣಿಕೆ ಬಗ್ಗೆ ಉಚಿತ ತರಬೇತಿ ನಡೆಯಲಿದೆ.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ದಾವಣಗೆರೆ ಪಿ.ಬಿ.ರಸ್ತೆಯ ಅರುಣ ಚಿತ್ರ ಮಂದಿರದ ಎದುರಿನ ಪಶು ಆಸ್ಪತ್ರೆ ಆವರಣದಲ್ಲಿರುವ ಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರದಲ್ಲಿ ಫೆ.19 ರಿಂದ 22 ರ ವರೆಗೆ 3 ದಿನಗಳ ಕಾಲ ಕುರಿ ಮತ್ತು ಮೇಕೆ ಸಾಕಾಣಿಕೆ ಕುರಿತು ಉಚಿತ ತರಬೇತಿ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಆಸಕ್ತಿಯುಳ್ಳ ರೈತರು, ಮಹಿಳೆಯರು, ನಿರುದ್ಯೋಗ ಯುವಕ/ಯುವತಿಯರು ಇದರ ಅನೂಕೂಲ ಪಡೆಯಬಹುದು. ಈ ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ. ತರಬೇತಿ ಅವಧಿಯಲ್ಲಿ ಊಟ, ವಸತಿ ಸೌಕರ್ಯದ ವ್ಯವಸ್ಥೆ ಇರುವುದಿಲ್ಲ.

ತರಬೇತಿಗೆ ಹಾಜರಾಗುವ ರೈತರು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, 2 ಪಾಸ್‍ಪೋರ್ಟ್ ಸೈಜ್ ಫೋಟೊ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ತರಬೇಕು ಎಂದು ಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top