ನವದೆಹಲಿ: ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 43.5 ರೂಪಾಯಿ ಏರಿಕೆ ಮಾಡಿದ್ದು, ಈ ಮೂಲಕ ಗ್ರಾಹಕರ ಮೇಲೆ ಮತ್ತೊಮ್ಮೆ ದರ ಏರಿಕೆ ಬರೆ ಬಿದ್ದಂತಾಗಿದೆ.
ಇಂದಿನಿಂದ (ಅ.1) ಅನ್ವಯವಾಗುವಂತೆ ವಾಣಿಜ್ಯ ಬಳಕೆಯ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಹೆಚ್ಚಿಸಲಾಗಿದೆ. 19 ಕೆ.ಜಿ.ಯ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 43.5 ರೂಪಾಯಿಗಳಷ್ಟು ಏರಿಕೆ ಕಂಡಿದ. ಇದರಿಂದ ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಬೆಲೆ 1693 ರೂ.ಗಳಿಂದ 1736.5 ರೂ.ಗೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಬೆಲೆ 35 ರೂ, ಮುಂಬೈನಲ್ಲಿ 35.5 ರೂ, ಚೆನ್ನೈನಲ್ಲಿ ರೂ.36.5 ರಷ್ಟು ಏರಿಕೆಯಾಗಿದೆ.



