ದಾವಣಗೆರೆ: ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-14 ಮಾರ್ಗದಲ್ಲಿ ತುರ್ತು ನಿರ್ವಾಹಣಾ ಕಾಮಗಾರಿ ಮತ್ತು ಪರಿವರ್ತಕದ ಲೋಡ್ ಬ್ಯಾಲೆಸ್ಸ್ ಹಮ್ಮಿಕೊಂಡಿರುವುದರಿಂದ ಎಫ್-14 ಯರಗುಂಟ ಮಾರ್ಗದ ಗ್ರಾಮಗಳಾದ ಯರಗುಂಟ, ಕರೂರು, ಅಶೋಕನಗರ ಮತ್ತು ಕೊಂಡಜ್ಜಿ ರೋಡ್ ಗ್ರಾಮಗಳಲ್ಲಿ ಸೆ.8 ರ ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಯರಗುಂಟ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-17 ಅಮೃತನಗರ ಮಾರ್ಗದಲ್ಲಿ ತುರ್ತು ನಿರ್ವಾಹಣಾ ಕಾಮಗಾರಿ ಮತ್ತು ಜಂಗಲ್ ಕಟಿಂಗ್ ಹಮ್ಮಿಕೊಂಡಿರುವುದರಿಂದ ಎಫ್-17 ಅಮೃತನಗರ ಮಾರ್ಗದ ಗ್ರಾಮಗಳಾದ ದೂಡ್ಡಬೂದಿಹಾಳ್, ಚಿಕ್ಕಬೂದಿಹಾಳ್, ದೇವರಹಟ್ಟಿ, ಚಿತ್ತನಹಳ್ಳಿ, ಬಿ. ಕಲ್ಪನಹಳ್ಳಿ ಮತ್ತು ಅಮೃತನಗರ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ



