ಲಕ್ನೋ: ಯೋಗ ಗುರು ಬಾಬಾ ರಾಮ್‍ದೇವ್ ಆನೆಯ ಮೇಲೆ ಕುಳಿತು ಯೋಗ ಮಾಡುತ್ತಿರುವಾಗಲೇ ಕಳಗೆ ಬಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.
ಮಥುರಾದ ರಾಮನಾರತಿಯ ಗುರು ಶರಣನ್ ಆಶ್ರಮದಲ್ಲಿ ಸಂತರಿಗೆ ಯೋಗ ಕಲಿಸುವಾಗ ಈ ಘಟನೆ ಸಂಭವಿಸಿದೆ. 22 ಸೆಕೆಂಡ್‍ಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
जब हाथी के ऊपर बैठकर योग करते हुए बाबा रामदेव नीचे गिर पड़े…
वीडियो: यशपाल सिंह और समीरात्मज मिश्र pic.twitter.com/WSmV44T5vn
— BBC News Hindi (@BBCHindi) October 13, 2020
ಆನೆಯ ಮೇಲೆ ಬಾಬಾ ರಾಮ್‍ದೇವ್ ಯೋಗಾಸನ ಮಾಡುತ್ತಿದ್ದು, ಕೆಲವೇ ಸೆಕೆಂಡ್‍ಗಳ ಬಳಿಕ ಆನೆ ಅತ್ತಿತ್ತ ವಾಲುತ್ತದೆ. ಈ ವೇಳೆ ರಾಮ್‍ದೇವ್ ಅವರ ಬ್ಯಾಲೆನ್ಸ್ ತಪ್ಪಿದ್ದು, ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಮೇಲಕ್ಕೆದ್ದು ಮುಂದೆ ಹೋಗಿದ್ದಾರೆ.
ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, ನೆಟ್ಟಿಗರು ಈ ಕುರಿತು ಕಮೆಂಟ್ ಮಾಡುತ್ತಿದ್ದಾರೆ. ಆನೆಗೆ ಯೋಗವನ್ನು ಸರಿಯಾಗಿ ಕಲಿಸಲಾಗಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದರೆ, ಬೀಳುತ್ತಿದ್ದಂತೆ ಕ್ಷಣಮಾತ್ರದಲ್ಲೇ ಮೇಲೆಳಲು ಬಾಬಾ ರಾಮ್‍ದೇವ್ ರಿಂದ ಮಾತ್ರ ಸಾಧ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ. ವಾಹ್ ನಾವು ಚಿಕ್ಕವರಿದ್ದಾಗಿನ ಉತ್ಸಾಹವನ್ನು ಬಾಬಾ ರಾಮ್‍ದೇವ್ ಇನ್ನೂ ಹೊಂದಿದ್ದಾರೆ ಇನ್ನೊಬ್ಬರು ತಿಳಿಸಿದ್ದಾರೆ. ಕೆಳಗೆ ಬೀಳುತ್ತಿದ್ದಂತೆ ಎದ್ದು ನಿಂತು ನಕ್ಕಿರುವುದು ನಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತದೆ ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಅಲ್ಲದೆ ಅವರು ಬಿದ್ದಿಲ್ಲ ಬದಲಿಗೆ ಜಂಪ್ ಮಾಡಿದ್ದಾರೆ ಅಂತ ಮಗದೊಬ್ಬರು ಕಮೆಂಟ್ ಮಾಡಿದ್ದಾರೆ.
ಈ ಹಿಂದೆ ಬಾಬಾ ರಾಮ್‍ದೇವ್, ಸೈಕಲ್ ಮೇಲಿಂದ ಬಿದ್ದಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಈ ವೇಳೆ ಸಹ ಸಾಕಷ್ಟು ಜನ ಅವರನ್ನು ಟ್ರೋಲ್ ಮಾಡಿದ್ದರು