ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಇಂದು ಮಧ್ಯಾಹ್ನ ಸಿಡಿಲು ಬಡಿದು ನಾಲ್ವರು ಮೃತಪಟ್ಟಿದ್ದಾರೆ. ಭಾರಿ ಗಾಳಿ, ಮಳೆ, ಗುಡುಗು ಸಿಡಿಲು ಉಂಟಾಗಿ ಈ ಘಟನೆ ನಡೆದಿದೆ.
ನೆಲಬೊಮ್ಮನಹಳ್ಳಿಯ ಚಿನ್ನಪ್ಪ(40), ವೀರಣ್ಣ(50), ಎಂ.ಬಿ. ಅಯ್ಯನಹಳ್ಳಿಯ ಬಿ. ಪತ್ರೆಪ್ಪ(43) ಹಾಗೂ ಹರವದಿ ಗ್ರಾಮದ ರಾಜಶೇಖರ(32) ಮೃತ ದುರ್ದೈವಿಗಳಾಗಿದ್ದಾರೆ. ನೆಲಬೊಮ್ಮನಹಳ್ಳಿಯ ಚಿನ್ನಪ್ಪ ಹಾಗೂ ವೀರಣ್ಣ ಹೊಲದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾಗ ಮರದ ಕೆಳಗೆ ನಿಂತಿದ್ದರಿಂದ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಎಂ.ಬಿ. ಅಯ್ಯನಹಳ್ಳಿಯ ಬಿ. ಪತ್ರೆಪ್ಪ ಮಾಳಿಗೆ ಮೇಲೆ ಸಿಡಿಲು ಬಡಿದಿದೆ.
ಹರವದಿ ಗ್ರಾಮದ ರಾಜಶೇಖರ್ ಕ್ಯಾಸನಕೆರೆ ಸಾವನ್ನಪ್ಪಿಸಿದ್ದಾರೆ. ಎಲ್ಲರೂ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸ್ಥಳಕ್ಕೆ ಕಂದಾಯ ಅಧಿಕಾರಿ, ಪೊಲೀಸ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.