ವಿಜಯನಗರ: ಹೊಸಪೇಟೆ ತಾಲೂಕಿನ ಹಾರುವನಹಳ್ಳಿಯಲ್ಲಿ ಸರ್ಕಾರಿ , ಖಾಸಗಿ ಇನೋವಾ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿ ನಾಲ್ವರ ಸಾವನ್ನಪ್ಪಿದ್ದಾರೆ. ಇನ್ನು ಎಂಟು ಜನ ಸ್ಥಿತಿ ಗಂಭೀರವಾಗಿದೆ.
ಎರಡು ಕಾರುಗಳ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸರ್ಕಾರಿ ಕಾರಿನಲ್ಲಿದ್ದ ಕೃಷ್ಣ ಜಲಭಾಗ್ಯ ನಿಗಮ ಮಂಡಳಿ ಅಧಿಕಾರಿ ಕೋದಂಡ ರಾಮಸ್ವಾಮಿ, ಜಿತೇಂದ್ರ ಪನ್ವರ್ , ಖಾಸಗಿ ಕಾರಿನಲ್ಲಿದ್ದ ಕಾವ್ಯ ಮತ್ತು ಶರಣಬಸವ ಸಾವನ್ನಪ್ಪಿದ್ಧಾರೆ. 8 ಜನರ ಸ್ಥಿತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಎರಡೂ ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.
ತಿಪಟೂರಿನಿಂದ ಕುಷ್ಟಗಿಯತ್ತ ಹೊರಟಿದ್ದ ಖಾಸಗಿ ಕಾರಿನ ಟೈಯರ್ ಬ್ಲಾಸ್ಟ್ ಆಗಿದ್ದರಿಂದ ಡಿವೈಡರ್ ಮೇಲೆ ಹಾರಿದು ಈ ಅವಘಡ ಸಂಭವಿಸಿದೆ. ಈ ಕಾರು ಹೊಸಪೇಟೆ ಕಡೆಯಿಂದ ಬೆಂಗಳೂರಿಗೆ ಹೊರಟಿದ್ದ ಸರ್ಕಾರಿ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಮರಿಯಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.