ವಿಜಯನಗರ: ಜಿಲ್ಲೆಯ ಪ್ರಸಿದ್ದ ಉಜ್ಜಿನಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ (ಏ.25) ಅದ್ಧೂರಿಯಾಗಿ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ರಥೋತ್ಸವ ಕಣ್ತುಂಬಿಕೊಂಡರು.
ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದರಥೋತ್ಸ ಕಾರ್ಯಕ್ರಮದಲ್ಲಿ ಮರಳಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥಕ್ಕೆ ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಡೊಳ್ಳು,ಸಮಾಳ, ನಂದಿಕೋಲು ಸೇರಿದಂತೆ, ವಿವಿಧ ವಾದ್ಯಗಳೊಂದಿಗೆ ನೆರೆದಿದ್ದ
ಲಕ್ಷಾಂತರ ಭಕ್ತರು ಜಯಘೋಷಣೆ ಕೂಗುತ್ತಾ ರಥ ಎಳೆಯಲಾಯಿತು.ಇಂದು ಶ್ರೀ ಸ್ವಾಮಿಯ ಶಿಖರದ ತೈಲಾಭಿಷೇಕ ನಡೆಯಲಿದ್ದು, ಗುರುವಾರ ಬ್ರಾಹ್ಮೀ ಮುಹೂರ್ತದಲ್ಲಿ ಮಹೇಶ್ವರ ಶಿವದೀಕ್ಷಾ ಕಾರ್ಯಕ್ರಮ ಜರುಗಲಿದೆ.



