ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎನ್.ತಿಪ್ಪಣ್ಣಗೆ ತುರ್ತು ನೋಟಿಸ್ ನೀಡಿ ಬೆಂಗಳೂರು ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಮಹಾಸಭವನ್ನು ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಅವರನ್ನು ಪದಚ್ಯುತಗೊಳಿಸಬೇಕು ಮತ್ತು ಮಹಾಸಭಾದಲ್ಲಿ ಲಿಂಗಾಯತ ಪದ ಸೇರ್ಪಡೆಗೆ ತಡೆ ನೀಡಬೇಕು ಎಂದು ಕೋರಲಾದ ಸಿವಿಲ್ ಕೋರ್ಟ್ ನಲ್ಲಿ ಎಸ್.ಎನ್.ಕೆಂಪಣ್ಣ ಸೇರಿದಂತೆ ಐವರು ಸಲ್ಲಿಸಿರುವ ಕೇಸ್ ದಾಖಲಿಸಿದ್ದರು. 9ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಮುಮ್ತಾಜ್, ಪ್ರಕರಣ ಆಲಿಸಿ ಪ್ರತಿವಾದಿಗಳ ಗೈರು ಹಾಜರಿ ಹಿನ್ನಲೆ ನೋಟಿಸ್ ಜಾರಿಗೆ ಆದೇಶಿಸಿ 2023ರ ಫೆ.17ಕ್ಕೆ ವಿಚಾರಣೆ ಮುಂದೂಡಿದೆ.
ಮಹಾಸಭಾ 2020ರಲ್ಲಿ ತನ್ನ ನಿಯಮಗಳ ತಿದ್ದುಪಡಿ ಮೂಲಕ ಲಿಂಗಾಯತ ಪದವನ್ನು ವೀರಶೈವದ ಜೊತೆ ಸೇರಿಸಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ಹೆಸರನ್ನು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಎಂದು ಬಳಸದಂತೆ ತಡೆ ನೀಡಬೇಕು ಎಂದು ಕೇಸ್ ದಾಖಲಿಸಿದ್ದಾರೆ.



