ಬೆಂಗಳೂರು: ಇದೇ ತಿಂಗಳು 24 ರಿಂದ ಮೂರು ದಿನ ದಾವಣಗೆರೆ ನಗರದ ಎಂಬಿಎ ಕಾಲೇಜು ಆವರಣದಲ್ಲಿ ನಡೆಯಬೇಕಿದ್ದ ಅಖಿಲ ಭಾರತ ವೀರಶೈವ ಮಹಾಸಭಾ 23ನೇ ಮಹಾ ಅಧಿವೇಶನ ಮುಂದೂಡಲಾಗಿದೆ ಎಂದು ಮಹಾ ಸಭಾ ಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ವೀರಶೈವ ಲಿಂಗಾಯತ ಮಹಾ ಸಭಾದ ಅಧಿವೇಶ ನಡೆಯುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಕಲಾಪ ನಡೆಯುವ ಹಿನ್ನಲೆ ಮುಂದೂಡಲಾಗಿದೆ. ಡಿ.24ರ ಬದಲಾಗಿ 2023 ರ ಫೆ.11 ರಿಂದ ಮೂರು ದಿನ ನಿಗದಿತ ಸ್ಥಳದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಡಿ.24 ರಿಂದ ಆಯೋಜಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದೀಗ ಮುಂದೂಡಲ್ಪಟ್ಟಿದೆ.



