ಹರಪನಹಳ್ಳಿ: ಕೋವಿಡ್ 2ನೇ ಅಲೆ ಹಿನ್ನೆಲೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಐತಿಹಾಸಿಕ ಶ್ರೀ ಉತ್ಸವಾಂಬ ದೇವಿಯ ಜಾತ್ರಾ ಮಹೋತ್ಸವ ರದ್ದಾಗಿದೆ.
ಐತಿಹಾಸಿಕ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಹಾಗೂ ಜಾತ್ರೆಗೆ ಆಗಮಿಸಲಿದ್ದಾರೆ. ಹೀಗಾಗಿ ಏ. 12ರಿಂದ 15ರ ವರೆಗೆ ಯುಗಾದಿ ಹಬ್ಬದಂದು ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವ ನಿಷೇಧಿಸಿದೆ.
ದೇವಸ್ಥಾನದ ಗುಡ್ಡದ ಮೇಲೆ, ಪಾದಗಟ್ಟೆಯ ಹತ್ತಿರ, ಹಾಲಮ್ಮನ ತೋಪಿನಲ್ಲಿ ದೇವಿ ದರ್ಶನ ಹಾಗೂ ಭಕ್ತರ ಪ್ರವೇಶವನ್ನು ನಿಷೇಧಿಸಿದೆ. ಭಕ್ತರು ಏ. 12 ರಿಂದ 15ರ ವರೆಗೆ ಉಚ್ಚಂಗಿದುರ್ಗಕ್ಕೆ ದೇವಿಯ ದರ್ಶನ ಹಾಗೂ ಜಾತ್ರೆಗೆ ಬರಬಾರದು ಎಂದು ಬಳ್ಳಾರಿ ಜಿಲ್ಲೆಯ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಪ್ರಕಾಶ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



