ತುಮಕೂರು: ಮಗಳು ಪ್ರೀತಿಸಿ ಮದುವೆಯಾಗಿದ್ದಕ್ಕೆ ಹುಡುಗನಿಗೆ ಸೇರಿರುವ ಸರಿ ಸುಮಾರು 250 ಅಡಿಕೆ ಸಸಿಗಳನ್ನು ಹುಡುಗಿ ಪೋಷಕರು ಕಡಿದು ಹಾಕಿರುವ ಘಟನೆ ತುಮಕೂರು ಜಿಲ್ಲೆಯ ಮಲ್ಲ ಸಂದ್ರ ಗ್ರಾಮದಲ್ಲಿ ನಡೆದಿದೆ.
ಮಲ್ಲ ಸಂದ್ರ ಗ್ರಾಮದ ರವಿಚಂದ್ರ , ಎರಡು ದಿನಗಳ ಹಿಂದೆ ಅನು ಎಂಬ ಯುವತಿಯನ್ನು ದೇವಾಸ್ಥಾನದಲ್ಲಿ ಮದುವೆಯಾಗಿದ್ದನು. ಇದಕ್ಕೆ ಷೋಷಕರ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಿವಾಹ ಸಹಿಸದ ಹುಡುಗಿಯ ಪೋಷಕರಾದ ಸಂತೋಷ ಹಾಗೂ ಗಂಗಮ್ಮ ಎನ್ನುವವರು ಸರಿ ಸುಮಾರು 250 ಅಡಿಕೆ ಸಸಿಗಳನ್ನು ಕಡಿಸಿದ ಆರೋಪ ಕೇಳಿ ಬಂದಿದೆ.



