ತುಮಕೂರು: ಈ ನನ್ ಮಗ ನಮ್ಮ ಮಂತ್ರಿ ಹೆಂಗೆ ಗೊತ್ತಾ…! ದಕ್ಷಿಣ ಕೊರಿಯಾದ ಕಿಂಗ್‌ಪಿನ್ ಇದ್ದಾನಲ್ಲ ಅವನಂತೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಸಂಸದ ಜಿ.ಎಸ್. ಬಸವರಾಜ- ಸಚಿವ ಬೈರತಿ ಬಸವರಾಜ್ ನಡುವಿನ ಪಿಸು ಮಾತಿನ ವಿಡಿಯೋ ವೈರಲ್ ಆಗಿದೆ.
ಮಾಧುಸ್ವಾಮಿ ನಮ್ಮ ಜಿಲ್ಲೆಯನ್ನು ಹಾಳು ಮಾಡಿದ್ದಾನೆ. ಜಿಲ್ಲೆಯಲ್ಲಿ ಮುಂದೆ ಒಂದು ಸೀಟೂ ಬರಲ್ಲ ಎಂದು ಸಂಸದ ಕಿಡಿಕಾರಿದ್ದಾರೆ. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಇಂದು ತುಮಕೂರಿಗೆ ಬಂದಿದ್ದರು. ಕಾರ್ಯಕ್ರಮಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯಲ್ಲಿ ಬೈರತಿ ಹಾಗೂ ಸಂಸದ ಬಸವರಾಜು ಅಕ್ಕಪಕ್ಕದಲ್ಲಿ ಕುಳಿತು ಗುಸುಗುಸು ಮಾತನಾಡಿದ್ದು ಕ್ಯಾಮರಾದಲ್ಲಿ ದಾಖಲಾಗಿತ್ತು.
ಮಂತ್ರಿ ಮಾತೆತ್ತಿದರೆ ಹೊಡಿ, ಕಡಿ ಅಂತಾನೆ. ಎಂಜಿನಿಯರ್‌ಗೆ ಹೆಂಡತಿ ಸೀರೆ ಸೆಣೆಯಲು ಲಾಯಕ್ಕು ಎನ್ನುತ್ತಾನೆ. ಸಭೆಯಿಂದ ನಡಿ ಆಚೆ ಅಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬೈರತಿ ಅವರು ಜಿ.ಎಸ್.ಬಸವರಾಜು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಮಾತು ಮುಂದುವರೆಸಿದ ಜಿ.ಎಸ್.ಬಸವರಾಜು ಅವನ್ಯಾರನ್ನೋ ನಮ್ಮ ತಾಲ್ಲೂಕಿಗೆ ಕರೆದುಕೊಂಡು ಬಂದ. ಅವನು ಬರುವಾಗಲೇ ಒಂದು ಸಾವಿರ ಕೋಟಿ ಡಿಕ್ಲೇರ್ ಮಾಡಿಕೊಂಡು ಬಂದಿದ್ದಾನೆ. ಅವನು ನಮ್ಮನ್ನು ಕರೆಯಲಿಲ್ಲ, ಮಾತನಾಡಿಸಲೂ ಇಲ್ಲ ಎಂದು ಕಿಡಿಕಾರಿದ್ದಾರೆ.



