ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಸಿರಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಮತ ಚಲಾಯಿಸಿದರು
ಮತಚಲಾಯಿಸಿ ಮಾತನಾಡಿದ ಶ್ರೀಗಾಲು, ಸಿರಿಗೆರೆಯ ಪ್ರಜ್ಞಾವಂತ ನಾಗರಿಕರು ಶೇ. 100 ರಷ್ಟು ಮತದಾನ ಮಾಡುವಂತೆ ಕರೆ ನೀಡಿದರು. ನಾಗರಿಕರಾಗಿ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವ ಎಲ್ಲಾ ನಾಗರಿಕರು ರಾಷ್ಟ್ರದ ಹಿತದೃಷ್ಟಿಯಿಂದ ಕಡ್ಡಾಯ ಮತದಾನ ಮಾಡುವಂತೆ ಕರೆ ನೀಡಿದರು. ಮತದಾನ ಮಾಡದವರಿಗೆ ನಾಗರಿಕ ಸೌಕರ್ಯಗಳು ರದ್ದು ಮಾಡುವಂತೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ವಿಶೇಷ ಕಾಯಿದೆ ಜಾರಿಗೆ ತರುವ ಅವಶ್ಯಕತೆ ಜರೂರಾಗಿ ಆಗಬೇಕಿದೆ ಎಂದು ಆಶಿಸಿದರು.
ಆಸ್ಟ್ರೇಲಿಯಾ ಮತ್ತಿತರ ದೇಶಗಳಲ್ಲಿ ನಾವು ಕಂಡಂತೆ ಮತದಾನ ಶೇಕಡಾ 100 ರಷ್ಟು ಆಗುವುದು. ನಮ್ಮಲ್ಲಿ ಇತ್ತಿಚಿನ ವರ್ಷಗಳಲ್ಲಿ ಜಾಗೃತಿ ತೀವ್ರವಾಗಿ ಮೂಡಿಸಿದ್ದರು ಮತದಾನ ನಮ್ಮ ಹಕ್ಕು ಎಂಬ ಭಾವನೆ ಪ್ರಜೆಗಳಲ್ಲಿ ಇನ್ನೂ ಅಲ್ಲಲ್ಲಿ ಮೂಡದೇ ಉದಾಸೀನತೆಯಿಂದ ಮತ ಚಲಾವಣೆಯಿಂದ ದೂರ ಉಳಿಯುತ್ತಿರುವುದು ನಿಜಕ್ಕೂ ಬೇಸರವಾದ ಸಂಗತಿಯಾಗಿದೆ ಎಂದರು. ಮತದಾನ ಮಾಡಲು ಆಸಕ್ತಿ ಇದ್ದರೂ ವಿಶೇಷ ಕಾರಣಗಳಿಂದ ಮತಚಲಾವಣೆಯಿಂದ ದೂರ ಉಳಿಯುವವರಿಗೆ ಆನ್ಲೈನ್ ಮತದಾನ ವ್ಯವಸ್ಥೆಯ ಮೂಲಕ ಯಾವುದೇ ಮತಗಟ್ಟೆಯಲ್ಲಿ ಮತ ಚಲಾಯಿಸುವ ಅವಕಾಶ ಕಲ್ಪಿಸುವಂತಾಗಬೇಕೆಂದು ಸಲಹೆ ನೀಡಿದರು. ಮತಗಟ್ಟೆ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿಯೊಂದಿಗೆ ಮತದಾನ ಪ್ರಕ್ರಿಯೆಯ ವಿಷಯಗಳನ್ನು ಚರ್ಚಿಸಿದರು.